

ಮೈಸೂರು: ತೀರಾ ಸಂಕೀರ್ಣ ಹಾಗೂ ಅಪರೂಪವೆನಿಸಿದ ವಿಪ್ಪಲ್ಸ್ ಸರ್ಜರಿ (ಪ್ಯಾಂಕ್ರಿಯಾಟಿಕೋಡ್ಯುಡೆನೆಕ್ಟಮಿ) ಮಾಡುವ ಮೂಲಕ ಅಪೊಲಪ ಬಿಜಿಎಸ್ ಆಸ್ಪತ್ರೆಯ ವೈದ್ಯರು 14 ವರ್ಷದ ಬಾಲಕನಿಗೆ ಮರುಜೀವ ನೀಡಿದ್ದಾರೆ. ಇದು ರಾಜ್ಯದಲ್ಲಿ ಅತಿ ಕಿರಿಯ ವ್ಯಕ್ತಿಗೆ ಮಾಡಿದ ಅಪರೂಪದ ಶಸ್ತ್ರಚಿಕಿತ್ಸೆಯಾಗಿದೆ.
ಕಳೆದ ನಾಲ್ಕು ವರ್ಷಗಳಿಂದ ಬಾಲಕನೊಬ್ಬನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಅದು ಇತ್ತೀಚೆನ ದಿನಗಳಲ್ಲಿ ತೀರಾ ಗಂಭೀರವಾಗಿತ್ತು. ಇದರಿಂದ ಬಾಲಕನಿಗೆ ನೋವು ಸಹಿಸಿಕೊಳ್ಳಲು ಹಾಗೂ ಆಹಾರ ಸೇವಿಸಲು ಅಸಾಧ್ಯವಾಗಿತ್ತು. ಎಂಡೋಸ್ಕೋಪಿಕ್ ಅಲ್ಟ್ರಾಸೌಂಡ್ ಸ್ಕಾೃನ್ ಮಾಡಿದಾಗ ಯಕೃತ್ತಿಗೆ ಸಂಪರ್ಕಿಸುವ ಮುಖ್ಯ ರಕ್ತನಾಳ ಸಂಕುಚಿತಕೊಳಗಾಗಿತ್ತು. ಬಾಲಕನಲ್ಲಿ ಮಲ್ಟಿಪಲ್ ಕೊಲಾಟರೆಲ್ಸ್ ಹಾಗೂ ಗಡ್ಡೆ ಕಂಡು ಬಂದಿತ್ತು. ನಂತರ ಬಾಲಕನಿಗೆ ಯಶಸ್ವಿಯಾಗಿ ವಿಪ್ಪಲ್ಸ್ ಸರ್ಜರಿ ನಡೆಸಲಾಯಿತು ಎಂದು ಆಸ್ಪತ್ರೆಯ ಮುಖ್ಯ ಶಸ್ತ್ರಚಿಕಿತ್ಸಕ ಡಾ. ಎಸ್. ನೈಋತ್ಯ ತಿಳಿಸಿದರು.
ಮಾನವ ದೇಹದ ಈ ನಿರ್ದಿಷ್ಟ ಭಾಗವು ಸಂಕೀರ್ಣ ಅಂಗರಚನೆಯಾಗಿರುತ್ತದೆ. ಹೀಗಾಗಿ ಈ ಶಸ್ತ್ರಚಿಕಿತ್ಸೆಗೆ 6 ಗಂಟೆ ತೆಗೆದುಕೊಳ್ಳ ಲಾಯಿತು. ಬಾಲಕನನ್ನು ಒಂದು ವಾರದ ನಂತರ ಡಿಸ್ಚಾರ್ಜ್ ಮಾಡಲಾಯಿತು. ಇದೀಗ ಬಾಲಕ ಆರೋಗ್ಯಯುತವಾಗಿದ್ದಾನೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶಸ್ತ್ರ ಚಿಕಿತ್ಸೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ವೈದ್ಯರಾದ ಅತಿರಾ, ರವೀಂದ್ರ ಪ್ರಸಾದ್, ಯಶ್ವಂತ್ ಕುಮಾರ್ ಇದ್ದರು.