

ಜಮಖಂಡಿ: ನಗರದ ಉಪವಿಭಾಗ ಸರ್ಕಾರಿ ಆಸ್ಪತ್ರೆ ವೈದ್ಯ ಡಾ. ಪವನ ಬಳ್ಳೂರ ಅಪರೂಪದ ಲಿಪೋಮಾ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಆಸ್ಪತ್ರೆಗೆ ಬಂದಿದ್ದ ರೋಗಿಯೊಬ್ಬರ ಚರ್ಮದೊಳಗಿನ ಗಡ್ಡೆಯನ್ನು ಪರೀಕ್ಷೆಗೆ ಒಳಪಡಿಸಿ ದೊಡ್ಡಗಾತ್ರದ ಲಿಪೋಮಾ ಗಡ್ಡೆಯನ್ನು ಅಂದಾಜು 45 ನಿಮಿಷಗಳವರೆಗೆ ಶಸಚಿಕಿತ್ಸೆ ನಡೆಸಿ ಹೊರತೆಗೆಯುವಲ್ಲಿ ಯಶಸ್ವಿಯಾದರು.
ಹಲವಾರು ವರ್ಷಗಳಿಂದ ಲಿಪೋಮಾ ಗಡ್ಡೆಯಿಂದ ಬಳಲುತಿದ್ದ ರೋಗಿಗೆ ಆಸ್ಪತ್ರೆಯಲ್ಲಿನ ಸೌಲಭ್ಯಗಳನ್ನೆ ಬಳಸಿಕೊಂಡು ಉಚಿತ ಚಿಕಿತ್ಸೆ ನೀಡಿದ್ದಾರೆ. ತಾಲೂಕು ಆಸ್ಪತ್ರೆಯಲ್ಲಿ ಇಷ್ಟು ದೊಡ್ಡ ಗಡ್ಡೆಯ ಶಸಚಿಕಿತ್ಸೆ ಮಾಡಿಸುವುದು ಹೇಗೆ ಎಂಬ ಅಳುಕಿತ್ತು. ಆದರೆ, ವೈದ್ಯ ಡಾ. ಪವನ ಬಳ್ಳೂರ ಅವರು ಧೈರ್ಯ ತುಂಬಿ ಶಸ್ತ್ರಚಿಕಿತ್ಸೆ ಮಾಡಿದ್ದು ನಮಗೆ ಆರ್ಥಿಕ ಹೊರೆ ತಡೆದಿದ್ದಾರೆ ಎಂದು ರೋಗಿಯ ಸಂಬಂಧಿಕದರು ತಿಳಿಸಿದ್ದಾರೆ.
ಲಿಪೋಮಾ ಗಡ್ಡೆ ಸಣ್ಣದಿದ್ದಾಗಲೇ ಚಿಕಿತ್ಸೆ ಪಡೆದುಕೊಳ್ಳಬೇಕು. ಅದನ್ನು ಬೆಳೆಯಲು ಬಿಡಬಾರದು. ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳು ಇದ್ದು. ಸಾರ್ವಜನಿಕರು ಅವುಗಳ ಪ್ರಯೋಜನ ಪಡೆದುಕೊಳ್ಳಬೇಕೆಂದು ವೈದ್ಯ ಡಾ. ಪವನ ಬಳ್ಳೂರ ತಿಳಿಸಿದರು.
ತಾಲೂಕುಮಟ್ಟದ ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ ಗುಣಮಟ್ಟದ ಶಸ್ತ್ರ ಚಿಕಿತ್ಸೆ ನೀಡುತ್ತಿರುವ ವೈದ್ಯರ ಸೇವೆಗೆ ನಾಗರಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.