

ಮಂಡ್ಯ: ಮಹಿಳೆಯರಿಗೆ ಗರ್ಭಕೋಶ ಹಾಗೂ ಅಂಡಾಶಯದಲ್ಲಿನ ಸಮಸ್ಯೆಗೆ ಲ್ಯಾಪರೊಸ್ಕೋಪಿ ಮೂಲಕ ನಡೆಸುವ ಶಸ್ತ್ರಚಿಕಿತ್ಸೆ ವರದಾನವಾಗಿದೆ. ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ಈಗಾಗಲೇ 60ಕ್ಕೂ ಹೆಚ್ಚು ಯಶಸ್ವಿ ಸರ್ಜರಿ ನಡೆದಿದೆ. ಮುಖ್ಯವಾಗಿ ಈ ಶಸ್ತ್ರಚಿಕಿತ್ಸೆಯಲ್ಲಿ ರೋಗಿ ಬೇಗ ಗುಣಮುಖವಾಗುವುದರ ಜತೆಗೆ ಖಾಸಗಿ ಆಸ್ಪತ್ರೆಗೆ ಲಕ್ಷಾಂತರ ರೂ ಪಾವತಿಸುವುದರಿಂದ ಪಾರಾಗಬಹುದು.
ಹಿಂದೆಲ್ಲ ಗರ್ಭಕೋಶ ಹಾಗೂ ಅಂಡಾಶಯದಲ್ಲಿನ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿರಲಿಲ್ಲ. ಕಾರಣ ಇದಕ್ಕೆ ಅನುಸರಿಸಬೇಕಾದ ಪ್ರಕ್ರಿಯೆ ಹೆಚ್ಚು. ಜತೆಗೆ ಸೌಲಭ್ಯದ ಸಮಸ್ಯೆಯೂ ಇರಬಹುದು. ಇದರಿಂದಾಗಿ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದವರು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಯತ್ತ ಮುಖ ಮಾಡಬೇಕಿತ್ತು. ಜತೆಗೆ 20 ಸಾವಿರ ರೂನಿಂದ ಲಕ್ಷಾಂತರ ರೂ ಪಾವತಿಸಬೇಕಿತ್ತು. ಆದರೆ ಈಗ ಮಿಮ್ಸ್‌ನಲ್ಲಿಯೇ ಶಸ್ತ್ರಚಿಕಿತ್ಸೆ ಲಭ್ಯವಿರುವುದರಿಂದ ಬಾದಿತರಿಗೆ ಅನುಕೂಲವಾಗಲಿದೆ.
ಏನಿದು ಲ್ಯಾಪರೊಸ್ಕೋಪಿ ಸರ್ಜರಿ?: ಮಹಿಳೆಯರಿಗೆ ಗರ್ಭಕೋಶ, ಅಂಡಾಶಯದ ಮೇಲಿನ ನೀರು ಗಂಟು, ಗರ್ಭದಲ್ಲಿ ಬೆಳೆದ ಗಡ್ಡೆಗಳು, ರಕ್ತಸ್ರಾವ, ನಂಜು ಸೇರಿದಂತೆ ಕೆಲ ಸಮಸ್ಯೆ ಎದುರಾಗುತ್ತದೆ. ಸಾಮಾನ್ಯವಾಗಿ 40 ವರ್ಷ ಮೇಲ್ಪಟ್ಟವರಿಗೆ ಇಂತಹ ತೊಂದರೆ ಕಾಣಿಸುತ್ತದೆ. ಇದಕ್ಕೆ ಹೊಟ್ಟೆ ಛೇದನ ಮಾಡಿಯೇ ವೈದ್ಯರು ಶಸ್ತ್ರಚಿಕಿತ್ಸೆಗೆ ನಡೆಸಬೇಕಿತ್ತು. ಮಾತ್ರವಲ್ಲದೆ ಸರ್ಜರಿ ಮಾಡಿಸಿಕೊಂಡವರು ವಾರಗಟ್ಟಲೇ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಬೇಕಿತ್ತು.
ಆದರೀಗ ತಂತ್ರಜ್ಞಾನ ಬದಲಾಗಿದೆ. ಲ್ಯಾಪರೊಸ್ಕೋಪಿ ಮೂಲಕ ನಡೆಸುವ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಲ್ಯಾಪರೋಸ್ಕೋಪ್ ಒಂದು ತೆಳುವಾದ ಮತ್ತು ತೆಳ್ಳಗಿನ ಸಾಧನ. ಅದರ ತುದಿಯಲ್ಲಿ ಸಣ್ಣ ಕ್ಯಾಮೆರಾ ಮತ್ತು ಬೆಳಕನ್ನು ಹೊಂದಿರುತ್ತದೆ. ಕೀ-ಹೋಲ್ ಶಸ್ತ್ರಚಿಕಿತ್ಸೆ ಸುರಕ್ಷಿತ ಮತ್ತು ಹೊಸ ವಿಧಾನ. ಶಸ್ತ್ರಚಿಕಿತ್ಸಕ ರೋಗಿಯ ದೇಹದ ಮೇಲೆ ಕೆಲವೇ ಮಿಲಿಮೀಟರ್ ಉದ್ದದ ಸಣ್ಣ ಹೋಲ್ ಮಾಡಿ ಶಸ್ತ್ರಚಿಕಿತ್ಸೆ ಆರಂಭಿಸುತ್ತಾರೆ. ಸಣ್ಣ ಹೋಲ್‌ಗಳ ಮೂಲಕ ಸಾಧನ ಮತ್ತು ಇತರೆ ಶಸ್ತ್ರಚಿಕಿತ್ಸೆ ಉಪಕರಣ ಸೇರಿಸುತ್ತದೆ. ಶಸ್ತ್ರಚಿಕಿತ್ಸೆ ಮಾಡುವವರಿಗೆ ದೇಹದ ಒಳಗಿನ ವೀಡಿಯೋವನ್ನು ಹೊರಗಿನ ವೀಡಿಯೋ ಪರದೆಯಲ್ಲಿ ನೋಡಲು ಕ್ಯಾಮೆರಾ ಸಹಾಯ ಮಾಡುತ್ತದೆ. ಇದರ ಮೂಲಕ ಸುಲಭವಾಗಿ ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸಬಹುದು.
ಇದಲ್ಲದೆ ಈ ವಿಧಾನದ ಶಸ್ತ್ರಚಿಕಿತ್ಸೆಯಿಂದ ರೋಗಿಯ ದೇಹದ ರಕ್ತಸ್ರಾವ ಕನಿಷ್ಟವಾಗಿರುತ್ತದೆ. ತೆರೆದ ಶಸ್ತ್ರಚಿಕಿತ್ಸೆಗಳಲ್ಲಿ ಮಾಡಿದ ದೇಹದ ಛೇದನಕ್ಕೆ ಹೋಲಿಸಿದರೆ ತುಂಬಾ ಚಿಕ್ಕದಾಗಿದೆ. ಮುಖ್ಯವಾಗಿ ರಕ್ತದ ನಷ್ಟವನ್ನು ಕಡಿಮೆ ಮಾಡುವುದಕ್ಕೆ ಅನುಕೂಲ. ಶಸ್ತ್ರಚಿಕಿತ್ಸೆ ಬಳಿಕ ನೋವು ಮತ್ತು ರಕ್ತಸ್ರಾವದ ಅಪಾಯವೂ ಕಡಿಮೆ. ಸರ್ಜರಿಗೊಳಪಟ್ಟ ರೋಗಿಯನ್ನು ಕೆಲವೇ ಗಂಟೆಯೊಳಗೆ ಮನೆಗೆ ಕಳುಹಿಸಬಹುದು. ಜತೆಗೆ ಸಾಮಾನ್ಯ ಚಟುವಟಿಕೆಗಳಿಗೆ ಮರಳಬಹುದು. ಗಾಯದ ಗುರುತು ಕೂಡ ಚಿಕ್ಕದಾಗಿರುತ್ತದೆ. ಗಾಯದ ಅಂಗಾಂಶಕ್ಕೆ ಸೋಂಕು ತಗುಲುವ ಸಾಧ್ಯತೆ ತೀರಾ ಕಡಿಮೆ.
ಸ40 ವರ್ಷ ಮೇಲ್ಪಟ್ಟವರಿಗೆ ಸಮಸ್ಯೆ ಎದುರಾದರೆ ಮೊದಲ ಹಂತದಲ್ಲಿ ಮಾತ್ರೆ, ಚುಚ್ಚುಮದ್ದು ನೀಡುವ ಮೂಲಕ ಪರಿಹರಿಸುವ ಪ್ರಯತ್ನ ನಡೆಯಲಿದೆ. ಆದರೂ ಬಗೆಹರಿಯದಿದ್ದರೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಅಂತೆಯೇ 40 ವರ್ಷ ಒಳಗಿನವರಿಗೆ ಸಮಸ್ಯೆ ಎದುರಾದರೆ ಹಾಗೂ ಅನಿವಾರ್ಯವಾಗಿದ್ದರೆ ನಿಖರವಾದ ದಾಖಲೆ ಒದಗಿಸಿ ಅನುಮತಿ ಪಡೆದು ಈ ಸರ್ಜರಿ ಮಾಡಬೇಕು. ಇದು ಸುಪ್ರೀಂ ಕೋರ್ಟ್‌ನ ಆದೇಶವಾಗಿದೆ.
ಕಳೆದ ಐದಾರೂ ತಿಂಗಳಿನಿಂದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಲ್ಯಾಪರೊಸ್ಕೋಪಿ ಮೂಲಕ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈವರೆಗೆ 60ಕ್ಕೂ ಹೆಚ್ಚು ಸರ್ಜರಿ ನಡೆದಿದ್ದು, ಎಲ್ಲವೂ ಯಶಸ್ವಿಯಾಗಿದೆ. ಈ ಪೈಕಿ 10 ಪ್ರಕರಣ ಗರ್ಭಕೋಶದ ಸಮಸ್ಯೆಯಾದರೆ, ಉಳಿದವು ಅಂಡಾಶಯಕ್ಕೆ ಸಂಬಂಧಿಸಿದ ಪ್ರಕರಣವಾಗಿವೆ. ಒಟ್ಟಾರೆ ಗರ್ಭಕೋಶ ಹಾಗೂ ಅಂಡಾಶಯ ಆರೋಗ್ಯದ ಸಮಸ್ಯೆ ಎದುರಿಸುತ್ತಿರುವ ಆರ್ಥಿಕವಾಗಿ ಹಿಂದುಳಿದವರಿಗೆ ದೊಡ್ಡ ಮಟ್ಟಿಗೆ ನೆರವಾಗಲಿದೆ.
ಮೊದಲ ಬಾರಿಗೆ ನೇರಪ್ರಸಾರ ಗರ್ಭಕೋಶ ಹಾಗೂ ಅಂಡಾಶಯ ಸಮಸ್ಯೆ ಬಗೆಹರಿಸಲು ನಡೆಸುವ ಶಸ್ತ್ರಚಿಕಿತ್ಸೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ಹಾಗೂ ಭವಿಷ್ಯದ ದೃಷ್ಟಿಯಿಂದಾಗಿ ಭಾರತೀಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘಗಳ ಒಕ್ಕೂಟ ಹಾಗೂ ಭಾರತೀಯ ಸ್ತ್ರೀರೋಗ ತಜ್ಞರ ಎಂಡೋಸ್ಕೋಪಿಗಳ ಸಂಘದ ಸಹಯೋಗದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ‘ಪ್ರಸೂತಿ ಸ್ತ್ರೀರೋಗ ತಜ್ಞರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ‘ಈಗಲ್ ಪ್ರಾಜೆಕ್ಟ್’ನಡಿ ಲ್ಯಾಪರೊಸ್ಕೋಪಿ ಶಸ್ತ್ರಚಿಕಿತ್ಸೆ ನೇರ ಪ್ರಸಾರವನ್ನು ಇತ್ತೀಚೆಗೆ ಮಿಮ್ಸ್‌ನಲ್ಲಿ ಆಯೋಜಿಸಲಾಗಿತ್ತು. ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರ, ಬೆಂಗಳೂರು, ರಾಮನಗರ, ದಾವಣಗೆರೆ, ತುಮಕೂರು ಸೇರಿದಂತೆ ಎಂಟು ಜಿಲ್ಲೆಗಳಿಂದ ವೈದ್ಯ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಪ್ರಸೂತಿ ಸ್ತ್ರೀರೋಗ ತಜ್ಞರು ಪಾಲ್ಗೊಂಡಿದ್ದರು. ಭಾರತೀಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘಗಳ ಒಕ್ಕೂಟದ ಸದಸ್ಯ ಕೇರಳದ ಸಿರಿಯಾಕ್ ಪಾಪಚ್ಚಿನ್ ಸೇರಿದಂತೆ ತಜ್ಞವೈದ್ಯರು ಲ್ಯಾಪರೊಸ್ಕೋಪಿ ಶಸ್ತ್ರಚಿಕಿತ್ಸೆಯನ್ನು ನೇರ ಪ್ರಸಾರದಲ್ಲಿ ಅನಾವರಣಗೊಳಿಸಿದರು. ರಾಜ್ಯದಲ್ಲಿಯೇ ಇಂತಹದೊಂದು ವಿಶೇಷ ಕ್ಷಣಕ್ಕೆ ಮಿಮ್ಸ್ ಸಾಕ್ಷಿಯಾಯಿತು. ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು ಲ್ಯಾಪರೋಸ್ಕೋಪಿ ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿ ಸಾಧಿಸಬೇಕು. ಸಾಮಾನ್ಯ ಜನರಿಗೆ ಶಸ್ತ್ರಚಿಕಿತ್ಸೆಯ ಸರಳ ವಿಧಾನವನ್ನು ಪರಿಚಯಿಸಬೇಕು. ಶಸ್ತ್ರಚಿಕಿತ್ಸೆಯಲ್ಲಿ ನೈಪುಣ್ಯತೆ ಸಾಧಿಸುವುದರೊಂದಿಗೆ ನುರಿತ ತಜ್ಞರೆಂಬ ಕೀರ್ತಿಗೆ ಪಾತ್ರರಾಗಬೇಕೆಂದು ‘ಈಗಲ್ ಪ್ರಾಜೆಕ್ಟ್’ನ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಶಸ್ತ್ರಚಿಕಿತ್ಸೆಯಲ್ಲಿ ಕೀ-ಹೋಲ್ ಮಾಡುವುದು ಹೇಗೆ?. ಸಾಧನ-ಉಪಕರಣಗಳ ಬಳಕೆ, ಶಸ್ತ್ರಚಿಕಿತ್ಸೆ ಸಮಯದಲ್ಲಿ ವಹಿಸಬೇಕಾದ ಮುಂಜಾಗ್ರತೆ ಕುರಿತು ಮಾರ್ಗದರ್ಶನ ನೀಡಲಾಯಿತು.
ಕೆಲ ತಿಂಗಳಿನಿಂದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಲ್ಯಾಪರೋಸ್ಕೋಪಿ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾರೆ. ಇದೊಂದು ವಿಶೇಷ ಸರ್ಜರಿ. ಗರ್ಭಕೋಶ ಮತ್ತು ಅಂಡಾಶಯದಲ್ಲಿನ ಸಮಸ್ಯೆಗೆ ಲ್ಯಾಪರೋಸ್ಕೋಪಿ ಸರ್ಜರಿ ಮಾಡಲಾಗುತ್ತದೆ. ಇದರಿಂದ ರೋಗಿಗಳಿಗೆ ತ್ವರಿತವಾಗಿ ಗುಣಮುಖವಾಗುತ್ತಾರೆ. ಮುಖ್ಯವಾಗಿ ರಕ್ತಸ್ರಾವದ ಸಮಸ್ಯೆ ಇರುವುದಿಲ್ಲ. ಖಾಸಗಿ ಸಂಸ್ಥೆಯಲ್ಲಿ ಸಾವಿರಾರೂ ರೂ ಕೊಡಬೇಕಿದೆ. ಡಾ.ನರಸಿಂಹಮೂರ್ತಿ ಮಿಮ್ಸ್ ನಿರ್ದೇಶಕ " class="alignnone size-medium wp-image-2593080" height="300" src="https://www.vijayavani.net/wp-content/uploads/2025/02/Dr.Narasimaswami-267x300.jpg" width="267"/> ಮಿಮ್ಸ್‌ನಲ್ಲಿ ಕಳೆದ ಐದಾರೂ ತಿಂಗಳಿನಿಂದ ಲ್ಯಾಪರೊಸ್ಕೋಪಿ ಮೂಲಕ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಸಂಸ್ಥೆಯ ಆಡಳಿತ ಮಂಡಳಿಯಿಂದ ಎಲ್ಲ ರೀತಿಯ ಸಹಕಾರ ಸಿಗುತ್ತಿದೆ. ಭವಿಷ್ಯದ ದೃಷ್ಟಿಯಿಂದ ವೈದ್ಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆನ್ನುವ ಕಾರಣಕ್ಕೆ ‘ಈಗಲ್ ಪ್ರಾಜೆಕ್ಟ್’ನಡಿ ಲ್ಯಾಪರೊಸ್ಕೋಪಿ ಶಸ್ತ್ರಚಿಕಿತ್ಸೆ ನೇರ ಪ್ರಸಾರ ಆಯೋಜಿಸಲಾಗಿತ್ತು. ನಮ್ಮ ಸಂಸ್ಥೆಯಲ್ಲಿ ಸಿಕ್ಕ ಸ್ಪಂದನೆಗೆ ವಿವಿಧೆಡೆಯಿಂದ ಆಗಮಿಸಿದ್ದ ತಜ್ಞರು ಸಂತಸ ವ್ಯಕ್ತಪಡಿಸಿದರು. ಡಾ.ಆರ್.ಮನೋಹರ್ ಜಿಲ್ಲಾ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯ, ಮಿಮ್ಸ್