

ಕೋಟ: ಕನಸಿದ್ದರೇ ಮಾರ್ಗ, ಕನಸು ಕಾಣಿ, ಪ್ರಯತ್ನ ಪಡಿ, ಚಿಂತೆ ಬಿಟ್ಟು ಚಿಂತನೆ ಮಾಡಿ, ಆರೋಗ್ಯವಂತರಾಗಿ ನಿಮ್ಮನ್ನು ನೀವು ಸಾಮಾಜಿಕವಾಗಿ ತೊಡಗಿಸಿಕೊಳ್ಳಿ, ಆತ್ಮವಿಶ್ವಾಸ ವೃದ್ಧಿಸಿಕೊಳ್ಳಿ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ಸಾಹಿತಿ ನರೇಂದ್ರ ಕುಮಾರ್ ಕೋಟ ಸದಸ್ಯರಿಗೆ ಕಿವಿಮಾತು ಹೇಳಿದರು.
ಕೋಟ ಮಹಿಳಾ ಮಂಡಳಿ ಸಭಾಭವನದಲ್ಲಿ ಭಾನುವಾರ ಸ್ನೇಹಕೂಟ ಮಣೂರು ಜುಲೈ ತಿಂಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶೇಷ ಆಹ್ವಾನಿತರಾಗಿ ಬಿಎಸ್‌ಎನ್‌ಎಲ್ ನಿವೃತ್ತ ಅಧಿಕಾರಿ ವಿಷ್ಣುಮೂರ್ತಿ ಮಯ್ಯ, ಮಹಿಳಾ ಮಂಡಳ ಕೋಟ ಮಾಜಿ ಅಧ್ಯಕ್ಷೆ ಸುಶೀಲಾ ಸೋಮಶೇಖರ್, ಮಣೂರು ಸ್ನೇಹಕೂಟದ ಸಂಚಾಲಕಿ ಭಾರತಿ ವಿ.ಮಯ್ಯ ಉಪಸ್ಥಿತರಿದ್ದರು.
ಸದಸ್ಯರಿಗಾಗಿ ವೈವಿಧ್ಯಮಯ ಆಟೋಟ ಸ್ಪರ್ಧೆಗಳು ಏರ್ಪಡಿಸಿದ್ದು, ವಿಜೇತರಿಗೆ ಬಹುಮಾನ ನೀಡಲಾಯಿತು. ಸದಸ್ಯೆ ಜ್ಯೋತಿ ಕೆದ್ಲಾಯ ಸ್ವಾಗತಿಸಿ. ಸದಸ್ಯೆ ಸ್ಮೀತಾ ನಿರೂಪಿಸಿ. ವನೀತಾ ಉಪಾಧ್ಯಾ ವಂದಿಸಿದರು.