ನಿರಂತರ ಪ್ರಯತ್ನದಿಂದ ಯಶಸ್ಸು

chetan commerce
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ವಿದ್ಯಾರ್ಥಿಗಳು ವೃತ್ತಿಪರ ಅವಕಾಶಗಳ ಬಗ್ಗೆ ಅರಿವು ಹೊಂದಿರಬೇಕು. ಜೀವನದಲ್ಲಿ ಯಶಸ್ಸು ಸಾಧಿಸಲು ನಿರಂತರ ಪ್ರಯತ್ನ ಅವಶ್ಯಕ ಎಂದು ಲೆಕ್ಕ ಪರಿಶೋಧಕ, ಶ್ರೀ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿ ಅಧ್ಯಕ್ಷ ಚನ್ನವೀರ ಮುಂಗರವಾಡಿ ಹೇಳಿದರು.

ನಗರದ ಚೇತನ ವಾಣಿಜ್ಯ ಬಿಬಿಎ ಮತ್ತು ಬಿಸಿಎ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ-ಮಂಥನ ಉದ್ಘಾಟಿಸಿ ಮಾತನಾಡಿದ ಅವರು, ಯಶಸ್ಸಿನತ್ತ ಸಾಗಿಸಲು ಹಲವು ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಚೇತನ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ. ವಿ.ಎಂ. ಕೊರವಿ ಮಾತನಾಡಿ, ಚೇತನ ಸಂಸ್ಥೆಯ ವಿದ್ಯಾರ್ಥಿಗಳು ಪ್ಲೇಸಮೆಂಟ್, ಪರೀಕ್ಷಾ ಫಲಿತಾಂಶ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ. ಬಿಸಿಎ ವಿಭಾಗವು ಜಿಎಚ್​ಆರ್​ಡಿಸಿ ರಾಷ್ಟ್ರ ಮಟ್ಟದ ಸರ್ವೆಯಲ್ಲಿ 10ನೇ ರ್ಯಾಂಕ್ ಗಳಿಸಿದೆ. ವಿದ್ಯಾರ್ಥಿಗಳಿಗೆ ಉಚಿತ ಪ್ರಮಾಣಪತ್ರ ಕೋರ್ಸ್​ಗಳನ್ನೂ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷ ಜಗದೀಶ ದ್ಯಾವಪ್ಪನವರ್, ಪ್ರಾಂಶುಪಾಲ ಡಾ. ಎ.ಆರ್. ವಡಕಣ್ಣವರ್, ಶೈಕ್ಷಣಿಕ ಸಲಹೆಗಾರ ಡಾ. ಕೆ.ಸಿ. ಪಾಂಗಿ, ಡಾ. ಶಿಲ್ಪಾ ಕುಲಕರ್ಣಿ, ಪೊ›. ಶರತ್ ಆರ್., ಪೊ›. ನಿಧಿ ದೇಶಪಾಂಡೆ, ಪೊ›. ಯಶೋಧ ನಾಯಕ, ಪೊ›. ಭಾರತಿ, ಪೊ›. ತೇಜಶ್ರೀ, ಪೊ›. ಅನುಪಮಾ, ಡಾ. ಅನ್ನಪೂರ್ಣ, ಇತರರು ಇದ್ದರು.

ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಸಾಧನೆ ಮಾಡಿದ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.  ಭಾಗ್ಯಶ್ರೀ ಬಳಿಗಾರ ನಿರೂಪಿಸಿದರು. ಪೊ›. ಅನುಪಮಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net