

ಆನಂದಪುರ: ಜೀವನದಲ್ಲಿ ಸಾಧನೆ ಮಾಡಲು ಆತ್ಮವಿಶ್ವಾಸ ಮತ್ತು ಛಲ ಮುಖ್ಯ. ಹಂತ ಹಂತವಾಗಿ ಶ್ರಮ ವಹಿಸಿದರೆ ಯಶಸ್ಸು ಸಾಧಿಸಬಹುದು ಎಂದು ಸಂಪನ್ಮೂಲ ವ್ಯಕ್ತಿ ನಾಗರಾಜ್ ಕೊಣನೂರು ಹೇಳಿದರು.
ಮುರುಘಾಮಠದ ಎಸ್‌ಜೆಜಿ ಶಿಕ್ಷಣ ಮಹಾವಿದ್ಯಾಲಯದ ಬಿಎಡ್ ಪ್ರಶಿಕ್ಷಣಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಯಶಸ್ವಿಯಾಗಿ ಎದುರಿಸುವ ಬಗ್ಗೆ ಏರ್ಪಡಿಸಿದ್ದ ಬೌದ್ಧಿಕ ಕೌಶಲ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿರಬೇಕು. ಪ್ರತಿ ಹಂತದಲ್ಲಿಯೂ ಯಶಸ್ವಿಯಾಗುವ ದಾರಿ ಅನುಸರಿಸಬೇಕು. ಇಂದಿನ ಯುಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಪ್ರತಿ ಪ್ರಶ್ನೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಉತ್ತರಿಸಬೇಕು. ಪದವಿ ಹಂತದಿಂದ ಎಲ್ಲ ರೀತಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಕರುಣಾಕರ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ರುಕ್ಮಿಣಿ, ಅಶೋಕ, ಕಚೇರಿ ಸೂಪರಿಡೆಂಟ್ ರಾಜೇಂದ್ರ, ಶೋಭಾ ಇದ್ದರು.