`ಚಿನ್ನ'ದ ಸಾಧಕರ ಯಶೋಗಾಥೆ

30 Dwd 3
Published on

ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸೋಮವಾರ ಜರುಗಿದ 73ನೇ ಘಟಿಕೋತ್ಸವದಲ್ಲಿ ಚಿನ್ನ'ದ ಸಾಧಕರ ಸಂಭ್ರಮ ಮನೆಮಾಡಿತ್ತು. ವಿವಿಧ ಪದವಿಗಳಲ್ಲಿ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಂದ ಚಿನ್ನದ ಪಕದಗಳಿಗೆ ಕೊರಳೊಡ್ಡಿ ಸಂಭ್ರಮಿಸಿದರು. ಕವಿವಿಯ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ರ‍್ಯಾಂಕ್ ವಿಜೇತ ನೇಹಾ ಸುಜಾಲಿ 9 ಹಾಗೂ ಎಂಎ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ದಾದಾಗೌಡ ಪಾಟೀಲ 9 ಚಿನ್ನದ ಪದಕ ಪಡೆದುಚಿನ್ನ'ದ ಸಾಧನೆ ಮೆರೆದರು.
ಕವಿವಿ ಎಂ.ಎಸ್‌ಸಿ ಬಯೋಕೆಮಿಸ್ಟಿ ವಿಭಾಗದ ಶುಭಾ ಲಕ್ಷಿ ನಾರಾಯಣ ಹೆಗಡೆ ಹಾಗೂ ಕವಿವಿ ಪ್ರಾಣಿಶಾಸ್ತç ವಿಭಾಗದ ಪವನ್‌ಕುಮಾರ್ ಎಂ.ಪಿ. ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸೌಮ್ಯಾ ಬ್ಯಾಡಗಿ ತಲಾ ೮ ಚಿನ್ನದ ಪದಕಗಳಿಗೆ ಕೊರಳೊಡ್ಡಿದರು. ಕವಿವಿ ರಸಾಯನಶಾಸ್ತç ವಿಭಾಗದ ಶ್ರೇಯಾ ಯು. ಪ್ರಭು ೭ ಚಿನ್ನದ ಪದಕ ತಮ್ಮದಾಗಿಸಿಕೊಂಡರು.
ಬಿಎಸ್.ಸಿ ಪದವಿಯಲ್ಲಿ ಕವಿವಿಗೆ ಪ್ರಥಮ ರ‍್ಯಾಂಕ್ ಪಡೆದ ಕುಮಟಾದ ಡಾ. ಎ.ವಿ. ಬಾಳಿಗಾ ಆರ್ಟ್ಸ್ ಆ್ಯಂಡ್ ಸೈನ್ಸ್ ಕಾಲೇಜಿನ ವಿದ್ಯಾರ್ಥಿನಿ ಚೈತ್ರಾ ಪರಮೇಶ್ವರ ಶಾನಭಾಗ್ ಹಾಗೂ ಎಂಎ ರಾಜ್ಯಶಾಸ್ತç ಪದವಿಯಲ್ಲಿ ರ‍್ಯಾಂಕ್ ವಿಜೇತ ಹೊನ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾವ್ಯಾ ರಮೇಶ ಕಿಮ್ಮನಿಕರ, ಎಂಎಸ್.ಸಿ ಗಣಿತಶಾಸ್ತçದಲ್ಲಿ ರ‍್ಯಾಂಕ್ ವಿಜೇತ ಕವಿವಿ ಗಣಿತಶಾಸ್ತç ವಿಭಾಗದ ದರ್ಶನ್ ಗೋಕುಲದಾಸ ಶಾನಭಾಗ ಹಾಗೂ ಕವಿವಿ ಕಾನೂನು ಮಹಾವಿದ್ಯಾಲಯದ ಮೇಘನಾ ಕೆ. ತಲಾ ೬ ಚಿನ್ನದ ಪದಕ ಪಡೆದರು.
ಚಿನ್ನದ ಪದಕ ವಿಜೇತ ಮಕ್ಕಳ ಸಂಭ್ರಮ ಕಣ್ತುಂಬಿಕೊ0ಡ ಪಾಲಕರೂ ಮಕ್ಕಳ ಸಾಧನೆಯನ್ನು ಕಂಡು ಸಂತಸಪಟ್ಟರು. ವಿಶ್ವವಿದ್ಯಾಲಯದ ಮುಖ್ಯ ಕಟ್ಟಡ, ಕಲಿತ ವಿಭಾಗ ಹಾಗೂ ಕಲಿಸಿದ ಪ್ರಾಧ್ಯಾಪಕರೊಂದಿಗೆ ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು.

ಚಿನ್ನದ ಬೇಟೆ: ಎಂಎ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ದಾದಾಗೌಡ ಪಾಟೀಲ 9 ಚಿನ್ನದ ಪದಕ ಪಡೆದರು. ರೈತನ ಮಗನಾದ ದಾದಾಗೌಡ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕು ಅಲಮೇಲ ಗ್ರಾಮದವನು. ಎಂ.ಎ ನಂತರ ಪತ್ರಿಕೆಯೊಂದರಲ್ಲಿ ವೃತ್ತಿ ಆರಂಭಿಸಿರುವ ದಾದಾಗೌಡ ಪಿಎಚ್.ಡಿ ಪದವಿ ಪೂರೈಸಿ ಪ್ರಾಧ್ಯಾಪಕನಾಗಬೇಕೆಂಬ ಗುರಿ ಹೊಂದಿದ್ದಾನೆ.
ಇನ್ನು ಕವಿವಿಯ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ರ‍್ಯಾಂಕ್ ವಿಜೇತ ನೇಹಾ ಸುಜಾಲಿ ಕೂಡ 9 ಪದಕಗಳೊಂದಿಗೆ ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದಳು. ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಮಾಲಗಾವಿಯ ನೇಹಾ ತಂದೆ ಶಿಕ್ಷಕ, ತಾಯಿ ಗೃಹಿಣಿ. ನೇಹಾ ಕೂಡ ಪಿಎಚ್.ಡಿ ಪೂರೈಸಿ ಬೋಧಕ ವೃತ್ತಿಯಲ್ಲಿ ಮುಂದುವರಿಯುವ ಗುರಿ ಇಟ್ಟುಕೊಂಡಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net