ಬದುಕನ್ನು ಪ್ರೀತಿಸಿದಾಗ ಮಾತ್ರ ಯಶಸ್ಸು

28 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜೀವನ ಪ್ರೀತಿ ಮೊದಲು ಎಲ್ಲರಿಗೂ ಇರಬೇಕು. ಅಂದಾಗಲೇ ನಮ್ಮ ಪ್ರತಿ ಕಾರ್ಯಗಳು ಯಶಸ್ವಿಯಾಗುತ್ತವೆ. ಜ್ಞಾನ ಎನ್ನುವುದು ವಿಶಾಲವಾದುದ್ದು. ಬದುಕಿನಲ್ಲಿ ಶಿಸ್ತು, ನಿರಂತರ ಅಭ್ಯಾಸ, ಉತ್ಸಾಹದೊಂದಿಗೆ ಪರಿಶ್ರಮ ಆತ್ಮವಿಶ್ವಾಸ ಬೆಳೆಸಿಕೊಂಡು ತಮ್ಮ ಜೀವನದ ಗುರಿ ಸಾಧಿಸಬೇಕು ಎಂದು ಬರಹಗಾರ್ತಿ ರೂಪಾ ಗುರುರಾಜ ಹೇಳಿದರು.

ನಗರದ ಜೆಎಸ್​ಎಸ್​ ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಕಾಲೇಜಿನಲ್ಲಿ ಏರ್ಪಡಿಸಿದ್ದ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾಷೆಯಲ್ಲಿ ಹಿಡಿತ ಸಾಧ್ಯವಾದರೆ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು. ಅನುಭವಗಳಿಗೆ ಮಹತ್ವವಿದೆ. ಶ್ರದ್ಧೆಯಿದ್ದರೆ ಮಾತ್ರ ಕಾರ್ಯದಲ್ಲಿ ಕ್ಷಮತೆ ಇರಲು ಸಾಧ್ಯ. ಬದುಕಿಗೆ ಯಾವುದೇ ಶರತ್ತುಗಳನ್ನು ಹಾಕಬಾರದು. ಅದು ವಿಕಾಸಗೊಳ್ಳುತ್ತಾ ಹೋಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಅಭಿವೃದ್ಧಿ ಅಧಿಕಾರಿ ಡಾ. ಸೂರಜ್​ ಜೈನ್​ ಮಾತನಾಡಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಉಪನ್ಯಾಸಕರಿಗೆ, ಕ್ರೀಡಾಪಟುಗಳಿಗೆ, ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಅವಂತಿಕಾ ರೊಟ್ಟಿ, ಎನ್​.ಡಿ. ಕುಲಕರ್ಣಿ, ಜಿನ್ನಪ್ಪ ಕುಂದಗೋಳ, ಡಾ. ಜಗದೀಶ ಬರಗಿ, ದೀಪ್ತಿ ಭಟ್​, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net