ಧನಾತ್ಮಕ ಚಿಂತನೆಯಿಂದ ಸಾಧನೆ ಸಾಧ್ಯ

kutamahajagathu
kutamahajagathu
Published on

ಕೋಟ: ನಾವೆಲ್ಲ ಒಂದೇ ಎನ್ನುವ ಭಾವನೆಯಿಂದ ಸಾಮರ್ಥ್ಯ, ದೌರ್ಬಲ್ಯ, ಅವಕಾಶ, ವಿಪತ್ತುಗಳ ಬಗ್ಗೆ ಪರಾಮರ್ಶೆ ವಾಡಿ ಧನಾತ್ಮಕ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸಾಧನೆ ಖಂಡಿತ ಸಾಧ್ಯ ಎಂದು ಬೆಂಗಳೂರಿನ ಸೋನಾ ಸಮೂಹ ಸಂಸ್ಥೆಗಳ ಸಿಇಓ ಕವ್ಮಾಜೆ ಯಜ್ಞನಾರಾಯಣ ಹೇರ್ಳೆ ಹೇಳಿದರು. ಸಾಲಿಗ್ರಾಮ ಗುರುನರಸಿಂಹ ಸಭಾಭವನದ ಡಾ.ಕೋಟ ಶಿವರಾಮ ಕಾರಂತ ವೇದಿಕೆಯಲ್ಲಿ ಭಾನುವಾರ ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ, ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗ ಸಂಸ್ಥೆ ಸಹಯೋಗದಲ್ಲಿ ನಡೆದ ಕೂಟ ಮಹಾಜಗತ್ತು ಸಾಲಿಗ್ರಾಮ ಕೇಂದ್ರ ಸಂಸ್ಥೆಯ ಕೇಂದ್ರೀಯ ಮಹಾಧಿವೇಶನಕ್ಕೆ ಚಾಲನೆ ನೀಡಿ ಮಾತನಾಡಿದರು. ದೇವಳ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಮಾತನಾಡಿ ಧನದ ಅಭಿಮಾನಿಯಾಗಬಾರದು. ಅಭಿಮಾನಧನರಾಗಬೇಕು. ಕೋಟದವರು ಕೆಲಸ ಮಾಡುವುದರಲ್ಲಿ ನಿಸ್ಸೀಮರು. ಆದರೆ ಅದನ್ನು ಪ್ರಚಾರ ಮಾಡುವುದರಲ್ಲಿ ಹಿಂದೆ ಬಿದ್ದಿದ್ದೇವೆ ಎಂದರು. ಕೂಟ ಮಹಾಜಗತ್ತು ಸಾಲಿಗ್ರಾಮದ ಕೇಂದ್ರಾಧ್ಯಕ್ಷ ಎಚ್.ಸತೀಶ ಹಂದೆ ಅಧ್ಯಕ್ಷತೆ ವಹಿಸಿದ್ದರು. ಸೋನಾ ಸಮೂಹ ಸಂಸ್ಥೆಗಳ ಸಿಇಓ ಕವ್ಮಾಜೆ ಯಜ್ಞನಾರಾಯಣ ಹೇರ್ಳೆ ಅವರನ್ನು ಅಭಿನಂದಿಸಲಾಯಿತು. ಬರಹಗಾರ ಹರಿನರಸಿಂಹ ಕಾರಂತ, ಕರ್ಣಾಟಕ ಬ್ಯಾಂಕ್‌ನ ಪ್ರಧಾನ ಪ್ರಬಂಧಕ ಚಂದ್ರಶೇಖರ ಮಯ್ಯ, ಉದ್ಯಮಿ ರುನಾಥ ಬಿ.ಸೋಮಯಾಜಿ, ಬಿಲಿಯನ್ ಫೌಂಡೇಶನ್ ಅಧ್ಯಕ್ಷ ಇ.ಗೋಪಾಲಕೃಷ್ಣ ಹೇರ್ಳೆ, ಕೂ.ಮ.ಜ ಉಪಾಧ್ಯಕ್ಷ ಸಿಎ ಬಿ.ಚಂದ್ರಶೇಖರ ಐತಾಳ, ಪಿ.ಸದಾಶಿವ ಐತಾಳ, ಕೂ.ಮ.ಜ ಸಾಲಿಗ್ರಾಮ ಅಂಗಸಂಸ್ಥೆ ಅಧ್ಯಕ್ಷ ಚಂದ್ರಶೇಖರ ಹೊಳ್ಳ, ಎಚ್.ಕೆ.ಕುಮಾರ ಹೊಳ್ಳ, ಭಾರತಿ ಶ್ರೀಧರ ಹಂದೆ, ಶ್ರೀಪತಿ ಅಧಿಕಾರಿ ಮತ್ತು ಮಹಾಬಲ ಹೇರ್ಳೆ ಇದ್ದರು. ಸತೀಶ ಹಂದೆ ಪ್ರಾಸ್ತಾವಿಸಿದರು. ಸುರೇಶ ತುಂಗ ಸ್ವಾಗತಿಸಿ, ಪಾಂಡೇಶ್ವರ ಚಂದ್ರಶೇಖರ ಹೊಳ್ಳ ವಂದಿಸಿದರು. ಸುಜಯೀಂದ್ರ ಹಂದೆ, ಯಶೋದಾ ಸಿ.ಹೊಳ್ಳ ಮತ್ತು ಕೃಷ್ಣ ಪ್ರಸಾದ ಹೇರ್ಳೆ ನಿರೂಪಿಸಿದರು.

 ವಿವಿಧ ಸಾಧಕರಿಗೆ ಸನ್ಮಾನ

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ವಾಡಿದ ಹಂದಟ್ಟು ಎಚ್.ಸದಾಶಿವ ಐತಾಳ, ಐರೋಡಿ ಎ.ಜಗದೀಶ ಕಾರಂತ, ಮಣೂರಿನ ರಾಮಕೃಷ್ಣ ಮಯ್ಯ ಎಚ್, ಹಂದಟ್ಟಿನ ಸೂರ್ಯನಾರಾಯಣ ಹಂದೆ, ಸಾಲಿಗ್ರಾಮದ ಡಾ.ಪಿ.ಸಿ ಸುಧಾಕರ ಹಂದೆ, ವಿಜಯಲಕ್ಷ್ಮೀ ಆರ್.ಹೊಳ್ಳ, ಚಂದ್ರಶೇಖರ ಕಾರಂತ ಅವರನ್ನು ಸನ್ಮಾನಿಸಲಾಯಿತು. ಸಾಲಿಗ್ರಾಮ ದೇಗುಲ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಅವರನ್ನು ಗೌರವಿಸಲಾಯಿತು. ಕೂಟಮಹಾಜಗತ್ತಿನ ಹಲವರನ್ನು ಗುರುತಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net