ಪರಿಶ್ರಮದಿಂದ ಯಶಸ್ಸು ಸಾಧ್ಯ: ರಾಜೇಶ್ ರೈ ಕಿವಿಮಾತು

Bel_Success
Published on

ಬೆಳ್ತಂಗಡಿ: ವಕೀಲರು ವೃತ್ತಿಯಲ್ಲಿ ಪ್ರಕರಣಗಳ ಬಗ್ಗೆ ಸತತ ಪರಿಶ್ರಮ ಮತ್ತು ಅಧ್ಯಯನ ನಡೆಸಿ ಕೆಲಸ ನಿರ್ವಹಿಸಿದಲ್ಲಿ ಕಕ್ಷಿಗಾರರಿಗೆ ನ್ಯಾಯ ದೊರಕುವ ಜತೆಗೆ ವೃತ್ತಿಯಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ರಾಜೇಶ್‌ರೈ ಕೈರಂಗಳ ಹೇಳಿದರು.

ಶನಿವಾರ ಬೆಳ್ತಂಗಡಿ ವಕೀಲರ ಸಂಘಕ್ಕೆ ಭೇಟಿ ನೀಡಿ ವಕೀಲರನ್ನುದ್ದೇಶಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯ ವಕೀಲರು ಅಧ್ಯಯನಶೀಲತೆ ಮೂಲಕ ಪಾಂಡಿತ್ಯ ಹೊಂದಿದ್ದು ನ್ಯಾಯಂಗದಲ್ಲಿ ತಮ್ಮದೇ ಆದ ಗೌರವ ಹೊಂದಿದ್ದಾರೆ. ಯುವ ವಕೀಲರು ನ್ಯಾಯಲಯದ ಕಲಾಪಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಹಿರಿಯ ವಕೀಲರು ಪ್ರಕರಣ ನಡೆಸುವ ಸಂದರ್ಭ ಆಲಿಸುವ ಮೂಲಕ ಸಮಯದ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

60 ವರ್ಷ ಹಳೆಯದಾದ ಬೆಳ್ತಂಗಡಿ ನ್ಯಾಯಾಲಯದ ಸಂಕೀರ್ಣ ವೀಕ್ಷಿಸಿ ಹೊಸ ಕಟ್ಟಡ ಮಂಜೂರಾತಿಗಾಗಿ ಸರ್ಕಾರದ ಮಟ್ಟದಲ್ಲಿ ಒತ್ತಡ ತರಲು ವಕೀಲರ ಸಂಘದ ಜತೆ ಕೈ ಜೋಡಿಸುವುದಾಗಿ ತಿಳಿಸಿದರು.

ವಕಿಲರ ಸಂಘ ಅಧ್ಯಕ್ಷ ವಸಂತ ಮರಕಡ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ನವೀನ್ ಬಿ.ಕೆ.ಸ್ವಾಗತಿಸಿ, ಅಪರ ಸರ್ಕಾರಿ ವಕೀಲ ಮನೋಹರ ಕುಮಾರ್ ಎ.ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net