ಶ್ರದ್ಧೆಯಿಂದ ತರಬೇತಿ ಪಡೆದರೆ ಯಶಸ್ಸು ಸಾಧ್ಯ

25 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಶ್ರದ್ಧೆಯಿಂದ ತರಬೇತಿ ಪಡೆದು ಪರಿಣಿತರಾದರೆ ಯಶಸ್ಸು ನಿಶ್ಚಿತವಾಗಿ ಸಿಗಲಿದೆ ಎಂದು ಸಿಡಾಕ್​ ಜಂಟಿ ನಿರ್ದೇಶಕ ಚಂದ್ರಶೇಖರ ಅಂಗಡಿ ಹೇಳಿದರು.
ನಗರದ ಸ್ವಾಮಿ ವಿವೇಕಾನಂದ ಯೂತ್​ ಮೂವ್​ಮೆಂಟ್​ ಸಂಸ್ಥೆಯ ಅಂಗ ಸಂಸ್ಥೆಯಾದ ವಿವೇಕ ಗ್ರಾಮೀಣ ಜೀವನಾಧಾರ ತರಬೇತಿ ಕೇಂದ್ರ ಹಾಗೂ ಯಶೋಧಾ ವೆಲ್ಫೇರ್​ ಟ್ರಸ್ಟ್​ ವತಿಯಿಂದ ವಿದ್ಯಾಗಿರಿಯ ತರಬೇತಿ ಕೇಂದ್ರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಮೋಬೈಲ್​ ರಿಪೇರಿ ಹಾಗೂ ಸವಿರ್ಸ್​ ತರಬೇತಿ ಶಿಬಿರದಲ್ಲಿ ಉದ್ಯಮಶೀಲತಾ ಅಭಿವೃದ್ಧಿ ಕುರಿತು ಉಪನ್ಯಾಸ ನೀಡಿದರು.
ಉದ್ಯಮಶೀಲತೆ ಎಂದರೇನು? ಉದ್ಯಮಶೀಲರಾಗಲು ಕೈಗೊಳ್ಳಬೇಕಾದ ಕ್ರಮ, ಜಾತಿ ಆಧಾರದ ಮೇಲೆ ನಿಗಮಗಳ ಮಂಡಳಿಗಳ ಮೂಲಕ ನೇರ ಸಬ್ಸಿಡಿ ಸಾಲ ಪಡೆಯುವ ವಿಧಾನ ಸೇರಿ ಇತರ ವಿಷಯಗಳ ಸಂರ್ಪೂಣ ಮಾಹಿತಿ ನೀಡಿದರು.
ಯಶೋಧಾ ವೆಲ್ಫೇರ್​ ಟ್ರಸ್ಟ್​ ಮ್ಯಾನೇಜಿಂಗ್​ ಟ್ರಸ್ಟಿ ಡಿ.ಆರ್​. ಅಗ್ನಿಹೋತ್ರಿ ಮಾತನಾಡಿ, ತರಬೇತಿ ಪೂರೈಸಿದ ನಂತರ ತಾವು ಯಶಸ್ವಿಗಳಾಗಿ ಸಮುದಾಯಕ್ಕೆ ಸಹಾಯ ಮಾಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ಸಹಾಯಕ ಕಲ್ಪಿಸಲು ಅನುಕೂಲವಾಗಲಿದೆ ಎಂದರು.
ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ಜಯಂತ ಕೆ.ಎಸ್​., ಪರ್ವತಗೌಡ ಶಲವಡಿ, ರೋಹಿಣಿ ಗಂಟಿ, ಆನಂದ ಅಗ್ನಿಹೋತ್ರಿ, ವಿಜಯ ಸತ್ತೂರ, ಶಶಿಧರ ಕೆ.ಎಂ, ರಾಘವೇಂದ್ರ ಹೊನ್ನಳ್ಳಿ, ಇತರರು ಇದ್ದರು.
ಎಸ್​ಡಿಎಂ ಇಂಜಿನಿಯರಿಂಗ್​ ಕಾಲೇಜಿನ ನಿವೃತ್ತ ಉಪನ್ಯಾಸಕ ಡಾ. ಗೋಪಾಲಕೃಷ್ಣ ಕಮಲಾಪುರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net