ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ

13ram2.jpg
Published on

ರಾಮದುರ್ಗ: ಪಿಯುಸಿ ವಿದ್ಯಾರ್ಥಿ ಜೀವನದ ಮುಖ್ಯ ಘಟ್ಟವಾಗಿದೆ. ಉನ್ನತ ಗುರಿಯೊಂದಿಗೆ ನಿರಂತರ ಅಧ್ಯಯನ ಮಾಡಿದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಉಪನ್ಯಾಸಕ ಡಾ.ಎ.ಬಿ.ವಗ್ಗರ ಹೇಳಿದರು.

ರಾಮದುರ್ಗದ ಶ್ರೀಮತಿ ಸುಶಿಲಾ ವೈ.ಕುಲಗೋಡ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕ್ರೀಡೆ ಹಾಗೂ ವಿವಿಧ ಸಂಘಗಳ ಚಟುವಟಿಕೆಗಳ ಸಮಾರಂಭವನ್ನು ವಿದ್ಯಾ ಪ್ರಸಾರಕ ಸಮಿತಿ ಅಧ್ಯಕ್ಷ ಟಿ.ದಾಮೋದರ ಉದ್ಘಾಟಿಸಿದರು. ಪಿ.ಎಂ.ಜಗತಾಪ ಮಾತನಾಡಿ, ಪ್ರೊ.ವೆಂಕಟೇಶ ಹುಣಸಿಕಟ್ಟಿ, ಆರ್.ಜಿ.ಡುಮಾವತ ಇತರರಿದ್ದರು.

ಪಟ್ಟಣದ ವಿದ್ಯಾ ಪ್ರಸಾರಕ ಸಮಿತಿಯ ಶ್ರೀಮತಿ ಸುಶಿಲಾ ವೈ.ಕುಲಗೋಡ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಕ್ರೀಡಾ ಹಾಗೂ ವಿವಿಧ ಸಂಘಗಳ ಚಟುವಟಿಕೆಗಳ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾ ಪ್ರಸಾರಕ ಸಮಿತಿ ಅಧ್ಯಕ್ಷ ಟಿ.ದಾಮೋದರ ಮಾತನಾಡಿ, ಕಾಲೇಜಿನಲ್ಲಿ ದೊರೆಯುವ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಂಡು ಮಕ್ಕಳು ಉನ್ನತ ಸಾಧನೆ ಮಾಡಬೇಕು ಎಂದರು.

ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಪಿ.ಎಂ.ಜಗತಾಪ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿಯೇ ಧನಾತ್ಮಕ ಚಿಂತನೆ ಮಾಡಬೇಕು ಎಂದರು.
ಪ್ರೊ.ವೆಂಕಟೇಶ ಹುಣಸಿಕಟ್ಟಿ, ಆರ್.ಜಿ.ಡುಮಾವತ, ಬಿ.ಬಿ. ಕಬಾಡಗಿ, ಉಪನ್ಯಾಸಕ ಡಿ.ಎಂ.ಮೊಗೇರಿ, ಪ್ರಾಚಾರ್ಯ ಎಂ.ಬಿ.ಪಾಟೀಲ, ಡಾ.ವಿ.ಬಿ.ವಗ್ಗರ, ಅಜಯ ಬಿರಾದಾರಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net