ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ

3-SGN-2 KRIDAKUTA
Published on

ಶಿಗ್ಗಾಂವಿ: ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆ ಹೊರಹಾಕುವಲ್ಲಿ ಕ್ರೀಡೆಗಳು ಪ್ರಮುಖ ಪಾತ್ರ ವಹಿಸುತ್ತದೆ. ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯವಿದೆ ಎಂದು ಹುಲಗೂರಿನ ಗ್ರಾಮೀಣ ವಿದ್ಯಾಭಿವೃದ್ಧಿ ಸಂಘದ ಸಂಘದ ಗೌರವ ಕಾರ್ಯದರ್ಶಿ ರವಿ ಕುಡವಕ್ಕಲಿಗೇರ ಹೇಳಿದರು.

ತಾಲೂಕಿನ ಹುಲಗೂರು ಗ್ರಾಮದಲ್ಲಿ ಮಂಗಳವಾರ ಶಾಲಾ ಶಿಕ್ಷಣ ಇಲಾಖೆ (ಪಪೂ) ಹಾಗೂ ಹುಲಗೂರಿನ ಗ್ರಾಮೀಣ ವಿದ್ಯಾಭಿವೃದ್ಧಿ ಸಂಘ (ರಿ) ಹಾಗೂ ಶ್ರೀಮತಿ ಗಂಗಮ್ಮ. ಎಸ್. ಬೊಮ್ಮಾಯಿ ಪದವಿಪೂರ್ವ ಮಹಾವಿದ್ಯಾಲಯ ಆಶ್ರಯದಲ್ಲಿ 2024-25ನೇ ಸಾಲಿನ ಶಿಗ್ಗಾಂವಿ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಆಟೋಟಗಳಲ್ಲಿ ಭಾಗವಹಿಸುವ ಮೂಲಕ ಸಾಧಕರಾಗಬೇಕು ಎಂದರು.

ಕ್ರೀಡಾಜ್ಯೋತಿ ಬೆಳಗಿಸಿದ ಗ್ರಾಪಂ ಅಧ್ಯಕ್ಷ ಜಾವೇದಅಹಮ್ಮದ್ ಸವಣೂರ ಮಾತನಾಡಿ, ದೈಹಿಕ ಸಾಮರ್ಥ್ಯ ಹೆಚ್ಚಿ ಆರೋಗ್ಯವಂತರಾಗಿರಲು ಕ್ರೀಡೆಗಳು ಹೆಚ್ಚು ಸಹಕಾರಿಯಾಗಿವೆ ಎಂದರು.

ಗ್ರಾಪಂ ಉಪಾಧ್ಯಕ್ಷೆ ಸುಮಾ ಹಿರೇಮಠ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮೀಣ ವಿದ್ಯಾಭಿವೃದ್ಧಿ ಸಂಘದ ಸದಸ್ಯ ಎಸ್.ವಿ. ಸೊಬರದ ಕ್ರೀಡಾಧ್ವಜಾರೋಹಣ ನೆರವೇರಿಸಿದರು. ಶಿಕ್ಷಕ ಎಸ್.ಬಿ. ಮುದಿಗೌಡ್ರ ಕ್ರೀಡಾಪಟುಗಳಿಗೆ ಪ್ರಮಾಣ ವಚನ ಬೋಧಿಸಿದರು.

ಬಸವರಾಜ ನೀರಲಗಿ, ಜಯವ್ವ ಗಾಣಿಗೇರ, ರೇಣುಕಾ ಪಾಟೀಲ, ಅನ್ನಪೂರ್ಣವ್ವ ಕರೆಯಣ್ಣನವರ, ಭೀಮಪ್ಪ ಬನ್ನೂರ, ದೇವಕ್ಕ ಈಳಿಗೇರ, ರುದ್ರಪ್ಪ ಕೆಳಗಿನಮನಿ, ಅಬ್ದುಲಖಾದರ್ ನರ್ತಿ, ಇತರರಿದ್ದರು. ಪ್ರಾಚಾರ್ಯ ಎಸ್.ಎಸ್. ಹುಬ್ಬಳ್ಳಿ, ಆರ್.ಎಸ್. ಹುಲ್ಲಮ್ಮನವರ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net