

ಬೆಳಗಾವಿ: ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಏಕಾಗ್ರತೆ ಮತ್ತು ಕ್ರಮಬದ್ಧ ಅಭ್ಯಾಸ ಅಳವಡಿಸಿಕೊಂಡರೆ ಮಾತ್ರ ಯಶಸ್ಸು ಸಿಗುತ್ತದೆ ಎಂದು ವಸಂತರಾವ್ ಪೋತದಾರ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಎಸ್.ಎಸ್ ಮಳಾಜ ಹೇಳಿದರು.
ನಗರದ ದಿ ಕರ್ನಾಟಕ ಲಾ ಸೊಸೈಟಿಯ ವಸಂತರಾವ್ ಪೋತದಾರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ 2025&26ನೇ ಶೈಣಿಕ ವರ್ಷದ ಪ್ರಾರಂಭೋತ್ಸವ ಮತ್ತು ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಮಯಕ್ಕೆ ಮಹತ್ವ ನೀಡಬೇಕು. ಕೀಳರಿಮೆ ಬಿಟ್ಟು ಸಮಯ ವ್ಯರ್ಥ ಮಾಡದೆ ಓದಿನೆಡೆಗೆ ಗಮನ ನೀಡುವ ಮೂಲಕ ಗುರಿ ಸಾಧನೆಗೆ ಮುಂದಾಗಬೇಕು ಎಂದರು.
ಕರ್ನಾಟಕ ಲಾ ಸೊಸೈಟಿ ವಸಂತರಾವ ಪೋತದಾರ ಪಾಲಿಟೆಕ್ನಿಕ್ ಗವರ್ನಿಂಗ್ ಕೌನ್ಸಿಲಿಂಗ್ ಅಧ್ಯ ಯು.ಎನ್ ಕಾಲಕುಂದ್ರಿಕರ್,ಅರ್ಕಿಟೆಕ್ಚರ್ ಅಸಿಸ್ಟೆಂಟ್ಶಿಪ್ ಮುಖ್ಯಸ್ಥ ಚಿನ್ಮಯ ಭಂಡಾರಿ, ಉಪನ್ಯಾಸಕಿ ಸ್ವಾತಿ ಜೋಷಿ ಇತರರಿದ್ದರು.