ಓದುವ ಹವ್ಯಾಸದಿಂದ ಯಶಸ್ಸು ಸಾಧ್ಯ

5ckd1
Published on

ಚಿಕ್ಕೋಡಿ: ವಿದ್ಯಾರ್ಥಿಗಳು ಮೊಬೈಲ್​ ಬಳಕೆ ಕಡಿಮೆಗೊಳಿಸಿ, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಬೆಂಗಳೂರು ವಿಧಾನಸೌಧದ ಉಪವಿಭಾಗಾಧಿಕಾರಿ ಮಲಗೌಡ ರರೆ ಹೇಳಿದರು.

ತಾಲೂಕಿನ ಕೆಎಲ್​ಇ ಇಂಜಿನಿಯರಿಂಗ್​ ಕಾಲೇಜಿನ ಎಂಬಿಎ ವಿಭಾಗದ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಒಂದು ದಿನದ ಮ್ಯಾನೇಜ್​ಮೆಂಟ್​ ಸಮ್ಮೇಳನ ಅಶ್ವಮೇಧ 2025ಕ್ಕೆ ಚಾಲನೆ ನೀಡಿ ಮಾತನಾಡಿ, ಬಿ.ಕಾಂ, ಬಿಬಿಎ ಹಾಗೂ ಎಂಬಿಎ ಪದವೀಧರರಿಗೆ ಮೀಸಲಾಗಿರುವ ಸಾಕಷ್ಟು ಸರ್ಕಾರಿ ಹುದ್ದೆಗಳಿದ್ದು, ಅವುಗಳ ಸದ್ಬಳಕೆ ಮಾಡಿಕೊಳ್ಳಿ.ಜನಸೇವೆ ಕೈಗೊಳ್ಳಲು ಸರ್ಕಾರಿ ಕ್ಷೇತ್ರಗಳಲ್ಲಿ ಉನ್ನತ ಹುದ್ದೆ ಪಡೆದುಕೊಳ್ಳುವ ಗುರಿ ಹೊಂದಿರಿ ಎಂದರು.

ಡಾ.ಪ್ರಸಾದ ರಾಂಪುರೆ ಅಧ್ಯತೆ ವಹಿಸಿದ್ದರು. ವಿವಿಧ ಜಿಲ್ಲೆಗಳಿಂದ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕುಮಾರ ಚೌಗಲಾ, ಡಾ.ಜಗನ್ನಾಥ ಜಾಧವ, ಡಾ.ಮಹಾಂತಯ್ಯ ಮಠಪತಿ, ಡಾ.ಸಚಿನ ಮೆಕ್ಕಳಕಿ, ಡಾ.ಪ್ರವಿಣ ಪಾಟೀಲ, ಡಾ.ಸುರೇಶ ಕುಂಬಾರ, ಅನಿತಾ ಬಿರಾಜ, ಸರಸ್ವತಿ ಕುರಣಿ, ಕೀರ್ತಿ ಪಾಟೀಲ, ಆನಂದ ಹಿರೇಮಠ, ಅನಿಶಾ ಪಾಂಡಾ ಇತರರಿದ್ದರು. ಡಾ.ಸಂಜಯ ಹನಗಂಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net