ಸತತ ಓದು, ಪ್ರಯತ್ನದಿಂದ ಸಾಧನೆ ಸಾಧ್ಯ

10 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮುಂದೆ ನಾನು ಏನಾಗಬೇಕು ಎಂಬುವದನ್ನು ಈಗಲೇ ನಿರ್ಧರಿಸಿ, ಆ ಕನಸನ್ನು ನನಸು ಮಾಡಲು ಪ್ರಯತ್ನಿಸಬೇಕು ಎಂದು ಪೊಲೀಸ್​ ಆಯುಕ್ತ ಎನ್​. ಶಶಿಕುಮಾರ ಹೇಳಿದರು.

ನಗರದ ಕರ್ನಾಟಕ ಕಲಾ ಕಾಲೇಜಿನ ಜಿಮಖಾನಾ ವಿಭಾಗ ವತಿಯಿಂದ ಸೃಜನಾ ರಂಗ ಮಂದಿರದಲ್ಲಿ ಏರ್ಪಡಿಸಿದ್ದ 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಜಿಮಖಾನ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸತತ ಓದು ಮತ್ತು ಪ್ರಯತ್ನದಿಂದ ಏನು ಬೇಕಾದರೂ ಸಾಧನೆ ಮಾಡಬಹುದು. ಸರಿಯಾದ ಗುರಿಯೊಂದಿಗೆ ಪೂರ್ವ ತಯಾರಿ ನಡೆಸಿದರೆ ಗುರಿ ತಲುಪಲು ಸಾಧ್ಯ. ಸಮಯಕ್ಕೆ ಮಹತ್ವ ನೀಡಬೇಕು. ಕಠಿಣ ಪರಿಶ್ರಮದಿಂದ ಓದುವುದು, ಪರಿಪೂರ್ಣ ವ್ಯಕ್ತಿತ್ವ ಹೊಂದಲು ಪ್ರಯತ್ನಿಸಬೇಕು ಎಂದರು.

ಡಿಸಿಪಿ ರವೀಶ ಸಿ.ಆರ್​. ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳೂ ಮುಖ್ಯ. ಸದಭಿರುಚಿಯ ಸಾಹಿತ್ಯ ಓದುವ ರೂಢಿ ಬೆಳೆಸಿಕೊಳ್ಳಬೇಕು ಎಂದರು.

ಜಾನಪದ ವಿದ್ವಾಂಸ ಡಾ. ರಾಮು ಮೂಲಗಿ ಮಾತನಾಡಿದರು. ಡಾ. ಡಿ.ಬಿ. ಕರಡೋಣಿ ಅಧ್ಯಕ್ಷತೆ ವಹಿಸಿದ್ದರು. ಡಾ.ಎಂ.ಆರ್​.ಹಿರೇಮಠ ಪ್ರಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net