ಸತತ ಪರಿಶ್ರಮದಿಂದ ಸಾಧನೆ ಸಾಧ್ಯ

3ckd1
Published on

ಚಿಕ್ಕೋಡಿ: ಭವಿಷ್ಯದಲ್ಲಿ ಮಕ್ಕಳಿಗೆ ಎದುರಾಗಬಹುದಾದ ಸಮಸ್ಯೆ ಹಾಗೂ ಸ್ವಚ್ಛತೆಯ ಬಗ್ಗೆ ಸ್ಪಂದಿಸುವುದು ಹೇಗೆ ಎಂಬುದನ್ನು ಸವಾಲಾಗಿ ಸ್ವೀಕರಿಸಬೇಕು ಎಂದು ಕಾನೂನು ಮಹಾವಿದ್ಯಾಲಯ ಉಪನ್ಯಾಸಕ ಪಿ.ಎಂ.ಕಮತೆ ಹೇಳಿದರು.

ಇಲ್ಲಿನ ಸಂಜೀವಿನಿ ಅನಾಥಾಶ್ರಮದಲ್ಲಿ ಕೆಎಲ್​ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ಕಾನೂನು ಸಲಹಾ ಕೋಶ ಮತ್ತು ಎನ್​ಎಸ್​ಎಸ್​ ಟಕದ ಸಹಯೋಗದಲ್ಲಿ ಅನಾಥ ಮಕ್ಕಳಿಗೆ ಭವಿಷ್ಯತ್ತಿನ ಸವಾಲುಗಳು ಎಂಬ ವಿಷಯದ ಮೇಲೆ ಈಚೆಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕ ೇತ್ರದಲ್ಲಿ ಸತತ ಪರಿಶ್ರಮ ಮತ್ತು ಅಧ್ಯಯನದಿಂದ ಸಾಧನೆ ಸಾಧ್ಯ ಎಂದರು. ಸಂಜೀವಿನಿ ಆಶ್ರಮದ ಸಂಚಾಲಕ ಓಂಕಾರ ಕಟ್ಟಿಮನಿ ಅದ್ಯತೆ ವಹಿಸಿದ್ದರು. ದೀಪಾಲಿ ಪಾಟೀಲ, ಸಂಧ್ಯಾ ವಾಮೊಡೆ, ಪ್ರತಿಷ್ಟಾ ಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net