ನಿಷ್ಟೆಯಿಂದ ದುಡಿದರೆ ಯಶಸ್ಸು ಸಾಧ್ಯ

Vollyball Match Inaguration
Published on

ಸಿದ್ದಾಪುರ: ಸಂಘಟನೆಗೆ ಸಮಾನ ಮನಸ್ಕರ ಅವಶ್ಯಕತೆ ಇದೆ. ಒಂದು ಕ್ರೀಡೆ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಬೇಕಾದರೆ ಎಲ್ಲರೂ ಒಟ್ಟಿಗೆ ಸೇರಿಕೊಂಡು ಒಮ್ಮತದಿಂದ ಸಂಘಟನೆ ಮಾಡಬೇಕಿದೆ, ನಿಷ್ಠೆಯಿಂದ ದುಡಿಯುತ್ತ ಬಂದರೆ ಯಶಸ್ಸು ಸಿಗುತ್ತದೆ, ಸೋಲಿಗೆ ತಲೆ ಕೆಡಿಸಿಕೊಳ್ಳದೆ ನಿರಂತರ ಪ್ರಯತ್ನದಲ್ಲಿದ್ದಾಗ ಯಶಸ್ಸು ನಮ್ಮದಾಗುತ್ತದೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಜಿ. ನಾಗರಾಜ ಹೇಳಿದರು.

ತಾಲೂಕಿನ ಲಂಬಾಪುರ ಸಮೀಪದ ಗಾಳ್ಮಾವ್​ನಲ್ಲಿ ಕಾಲಭೈರವೇಶ್ವರ ಯುವಕ ಸಂಘದವರು ಭಾನುವಾರ ಆಯೋಜಿಸಿದ್ದ ನಾಲ್ಕನೇ ವರ್ಷದ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ತಾಪಂ ಮಾಜಿ ಅಧ್ಯಕ್ಷ ಸಿ. ಆರ್. ನಾಯ್ಕ, ವಾಜಗೋಡು ಗ್ರಾಪಂ ಸದಸ್ಯ ಕೃಷ್ಣಮೂರ್ತಿ ಐಸೂರ, ಪ್ರಮುಖರಾದ ಐ. ಕೆ .ನಾಯ್ಕ ಸುಂಗೋಳಿಮನೆ, ಕೃಷ್ಣ ಲಿಂಗಾ ನಾಯ್ಕ, ಸಿಂಧು, ಗಣಪತಿ ಭಟ್ಟ ಸುತ್ಲಮನೆ, ನಾಗರಾಜ ನಾಯ್ಕ, ಡಿ.ಕೆ. ಸುತ್ಲಮನೆ, ಅಣ್ಣಪ್ಪ ಶಿರಳಗಿ, ಹೇಮಂತ ನಾಯ್ಕ, ಬಿ. ಎಲ್. ನಾಯ್ಕ, ಶ್ರೀಧರ ನಾಯ್ಕ ಇತರರಿದ್ದರು.

ವಾಜಗೋಡು ಗ್ರಾಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.

ಗ್ರಾಪಂ ಸದಸ್ಯ ಸುರೇಶ್ ನಾಯ್ಕ ಸ್ವಾಗತಿಸಿದರು.ಪತ್ರಕರ್ತ ದಿವಾಕರ ಸಂಪಖಂಡ ನಿರ್ವಹಿಸಿದರು. ರಮೇಶ ನಾಯ್ಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net