ಸಾಧಿಸುವ ಛಲ ಇದ್ದರೆ ಯಶಸ್ಸು

Untitled-2
ನೆಲಮಂಗಲದ ಶ್ರೀ ಬಸವಣ್ಣ ದೇವರ ಮಠದ ಶ್ರೀ ಬಸವೇಶ್ವರ ಆಂಗ್ಲ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇತಿಹಾಸ ತ ಧಮೇಂರ್ದ್ರಕುಮಾರ್​ ಅವರನ್ನು ಸನ್ಮಾನಿಸಲಾಯಿತು. ಶ್ರೀ ಸಿದ್ದಲಿಂಗಸ್ವಾಮೀಜಿ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯ ಕವಾಡಿ ಮಠದ ಧರ್ಮದರ್ಶಿ ಎನ್​.ಗಂಗರಾಜು, ಸವಿತಾ ಸಮಾಜದ ಉಪಾಧ್ಯಕ್ಷ ಶ್ರೀನಿವಾಸ್​, ಕಾರ್ಯದರ್ಶಿ ಶಿವಕುಮಾರ್​, ಖಜಾಂಚಿ ನವೀನ್​ಕುಮಾರ್​, ರೈತ ಬಾವಿಕೆರೆ ಶಿವಕುಮಾರ್​, ಮುಖ್ಯಶಿಕ್ಷಕ ಕೆಂಪಣ್ಣ ಇದ್ದರು.
Published on

ನೆಲಮಂಗಲ: ಗುರಿ ಸಾಧಿಸುವ ಛಲ ಹಾಗೂ ತ್ಯಾಗದ ಮನೋಭಾವ ಇದ್ದವರು ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಇತಿಹಾಸ ತ ಧಮೇಂರ್ದ್ರಕುಮಾರ್​ ತಿಳಿಸಿದರು.

ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಬಸವೇಶ್ವರ ಆಂಗ್ಲ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ

ನಾಲ್ವಡಿ ಕೃಷ್ಣರಾಜ ಒಡೆಯರ್​ ಜಯಂತಿ, ನಾಡ ಪ್ರಭು ಕೆಂಪೇಗೌಡರ ಜಯಂತಿ, ಹಾಲು ದಿನ, ತಂದೆಯರ ದಿನ ಹಾಗೂ ಕ್ಷೌರಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ವಿಶ್ವದಾದ್ಯಂತ 700 ಕೋಟಿ ಜನರಿದ್ದು, ಪ್ರತಿಯೊಬ್ಬರಿಗೂ ಭಗವಂತ ಚೈತನ್ಯ, ಚಿಂತನೆ ಹಾಗೂ ಕೌಶಲ ನೀಡಿದ್ದಾನೆ. ಆದರೆ ಅದನ್ನು ಅರ್ಥೈಸಿಕೊಂಡಾಗ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ. ಶಿಕ್ಷಣದ ಜತೆಗೆ ಕೌಶಲ ಇದ್ದರೆ ಬದುಕು ಕಟ್ಟಿಕೊಳ್ಳಬಹುದು. ನಿಮ್ಮ ಚಿಂತನೆಗಳನ್ನು ಮತ್ತೊಬ್ಬರಿಗೆ ಎಂದಿಗೂ ಹೊಲಿಕೆ ಮಾಡಿಕೊಳ್ಳಬಾರದು.

ಬದುಕಿನ ಯಶಸ್ಸು ನಿಮ್ಮ ಕೈಯಲ್ಲೇ ಇದೆ. ಸಮಾಜದ ಬೆಳೆಯುತ್ತಿದ್ದಂತೆ ತಂತ್ರಜ್ಞಾನ ಹೆಚ್ಚಾಗುತ್ತಿದೆ. ಆದರೆ ದೇಶದ ಯುವಕರು ಉತ್ಸವ ಜಾತ್ರೆ ಎಂದು ಮೈ ಮರೆಯುತ್ತಿದ್ದಾರೆ. ಬದುಕನ್ನು ಗಂಭೀರವಾಗಿ ತಗೆದುಕೊಳ್ಳಬೇಕು. ನಿಮ್ಮಲ್ಲಿರುವ ವಿಶೇಷ ಕೌಶಲವನ್ನು ನೀವೆ ಗುರುತಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಕೇವಲ ಹಣ ಗಳಿಕೆ ಮಾತ್ರ ವಿದ್ಯಾಭ್ಯಾಸ ಮಾಡಬಾರದು. ಕೌಶಲ, ಜ್ಞಾನ ಹಾಗೂ ಮಾನವೀಯ ಮೌಲ್ಯಗಳನ್ನು ಸಂಪಾದಿಸಲು ವಿದ್ಯೆ ಕಲಿಸಬೇಕು ಎಂದರು. ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್​ ಅವರು ಪ್ರಪಂಚದ ಕಂಡ 7ನೇ ಶ್ರೀಮಂತ ದೊರೆಯಾಗಿದ್ದರು.

1911ರಲ್ಲಿ ಕಾರ್ಖಾನೆ, ಅಣೆಕಟ್ಟು ಸೇರಿ 37 ಯೋಜನೆಗಳನ್ನು ಯಶಸ್ವಿ ಮಾಡಿದ್ದಾರೆ. ಜತೆಗೆ ಮೈಸೂರು ಸಂಸ್ಥಾನದಲ್ಲೇ ಮೊದಲ ಬಾರಿ ಮಿಲ್ಲರ್​ ವರದಿ ಮೂಲಕ ಮೀಸಲಾತಿ ಜಾರಿಗೊಳಿಸಿದ್ದ ಮಹಾನ್​ ಚೇತನ. ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್​ ಅವರ ತ್ಯಾಗ ಅಪಾರವಾಗಿದೆ ಎಂದರು.

ವೃತ್ತಿ ಗೌರವ ಇರಲಿ : ಪ್ರತಿಯೊಬ್ಬರು ಬದುಕಿನ ವಾಸ್ತವತೆ ಅರ್ಥೈಸಿಕೊಳ್ಳಬೇಕು. ನಾಲ್ವಡಿ ಹಾಗೂ ಕೆಂಪೇಗೌಡರ ಕೊಡುಗೆ ಸಮಾಜಕ್ಕೆ ಸಾಕಷ್ಟು ಉಪಯುಕ್ತವಾಗಿದೆ. ಗ್ರಾಮೀಣ ಜನರು ಕೃಷಿ ಜತೆಗೆ ಹೈನುಗಾರಿಕೆ ನಂಬಿಕೊಂಡು ಆರ್ಥಿಕ ಸಬಲರಾಗಿದ್ದು, ದೇಶದಲ್ಲೇ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡಲು ಎರಡನೇ ರಾಜ್ಯವಾಗಿದೆ. ಸಮಾಜದಲ್ಲಿ ಯಾವುದೇ ವೃತ್ತಿ ಮೇಲಲ್ಲ, ಯಾವುದು ಕಡಿಮೆಯಲ್ಲ ಎಂಬುದು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಿದೆ. ವಿದ್ಯಾರ್ಥಿಗಳು ಮಹನೀಯರ ಆದರ್ಶಯುತ ಬದುಕಿನ ಬಗ್ಗೆ ತಿಳಿದುಕೊಂಡು ನಿತ್ಯ ಸ್ಮರಣೆ ಮಾಡುತ್ತಾ ಅವರ ಹಾದಿಯಲ್ಲಿ ಸಾಗಬೇಕು ಎಂದು ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net