ಪ್ರತಿಭೆ ಜತೆಗೆ ಪರಿಶ್ರಮವಿದ್ದರೆ ಸಾಧನೆ ಸಾಧ್ಯ

byn (8)
Published on

ಬೈಂದೂರು: ಜೀವನದಲ್ಲಿ ಸಾಧನೆ ಮಾಡುವುದು ಸುಲಭದ ಮಾತಲ್ಲ. ಕೇವಲ ಪ್ರತಿಭೆಯಿಂದ ವಾತ್ರ ಯಶಸ್ಸು ಕಾಣಲಾಗದು. ಕಠಿಣ ಪ್ರಯತ್ನದಿಂದ ವಾತ್ರ ವಿದ್ಯಾರ್ಥಿಗಳು ಸಾಧನೆ ವಾಡಲು ಸಾಧ್ಯ. ಜಗತ್ತಿನಲ್ಲಿ ಯಾವುದೂ ಕೂಡ ಸುಲಭವಾಗಿ ದಕ್ಕುವುದಿಲ್ಲ. ನಾವು ಸ್ವೀಕರಿಸುವ ರೀತಿ ಮತ್ತು ಸಾಧಿಸುವ ಛಲ ಹಾಗೂ ಸತತ ಪರಿಶ್ರಮ ಬದುಕಿಗೆ ಸಾರ್ಥಕತೆಯನ್ನು ನೀಡುತ್ತದೆ ಎಂದು ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಾಗರಾಜ ಶೆಟ್ಟಿ ಹೇಳಿದರು.

ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಕೊಡವಾಡುವ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದರು.

ಸಂಘ ಅಧ್ಯಕ್ಷ ಎಸ್.ರಾಜು ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಸವಾಜಕ್ಕೆ ಶಕ್ತಿ ತುಂಬುವ ಆಸ್ತಿಯಾಗಬೇಕು. ಭಾರತೀಯ ಸಂಸ್ಕೃತಿ ಆಧಾರಿತ ಶಿಕ್ಷಣ ನೀಡುವ ಮೂಲಕ ಮಕ್ಕಳಲ್ಲಿ ದೇಶಪ್ರೇಮ ಬೆಳೆಸಲು ಪಾಲಕರು ಪ್ರೋತ್ಸಾಹ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಪಡೆದ ನಿಧಿಶ್ರೀ ಬಿಜೂರು ಅವರನ್ನು ಸನ್ಮಾನಿಸಲಾಯಿತು. ಸಂಘದ ಅರ್ಹ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಉದ್ಯಮಿ ಸೂಲ್ಯಯಣ್ಣ ಶೆಟ್ಟಿ, ಉದ್ಯಾವರ ಎಸ್‌ಡಿಎಂ ಆರ್ಯುವೇದ ಕಾಲೇಜಿನ ಅಧೀಕ್ಷಕ ಡಾ.ನಾಗರಾಜ, ಸಂದ ಉಪಾಧ್ಯಕ್ಷ ಎಂ.ವಿನಾಯಕ ರಾವ್, ನಿರ್ದೇಶಕರಾದ ಸೀತಾರಾಮ ಮಡಿವಾಳ, ರಾಮಕೃಷ್ಣ ಖಾರ್ವಿ, ಮಂಜು ಪೂಜಾರಿ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು. ಕಿಟ್ಟಣ್ಣ ರೈ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net