ಅವಕಾಶಗಳ ಸದ್ಬಳಕೆಯಿಂದ ಸಾಧನೆ ಸಾಧ್ಯ

Certificate Distribution
Published on

ಸಿದ್ದಾಪುರ: ಸಿಕ್ಕಿರುವ ಅವಕಾಶಗಳನ್ನು ಸರಿಯಾಗಿ ಪ್ರತಿಭೆ ಹೊರ ಹೊಮ್ಮಲು ಸಾಧ್ಯವಾಗುತ್ತದೆ. ಶಿಬಿರಗಳು ಅಂತಹ ಅವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ತಾಲೂಕಿನ ಕೋಲಸಿರ್ಸಿಯಲ್ಲಿ ಆಧಾರ ಶಿಕ್ಷಣ, ಸ್ವ-ಉದ್ಯೋಗ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪತ್ರಕರ್ತ ದಿ. ಶಿವಶಂಕರ್ ಕೋಲಸಿರ್ಸಿ ಅವರ ನೆನಪಿನ ಕಲರವ - 2025 ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಿ ಅವರು ಮಾತನಾಡಿದರು. ಶಿಕ್ಷಣವು ನಮಗೆ ಒಳ್ಳೆಯ ಸಂಸ್ಕಾರ ನೀಡುತ್ತದೆ. ನಾವು ಶಿಬಿರದಲ್ಲಿ ಸಿಕ್ಕ ಒಳ್ಳೆಯ ವಿಚಾರಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳಬೇಕು. ಪುಸ್ತಕ ಕೇವಲ ಓದಿಗೆ ಮಾತ್ರ ಸೀಮಿವಾಗಿರದೆ ತಿಳಿದ ಜ್ಞಾನವನ್ನು ಸಮಾಜ ಸೇವೆಗೆ ಬಳಸಿಕೊಳ್ಳುಬೇಕು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.

ಆಧಾರ ಸಂಸ್ಥೆ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ಅಧ್ಯಕ್ಷತೆವಹಿಸಿದ್ದರು. ಕೋಲಸಿರ್ಸಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ಆರ್. ವಿನಾಯಕ, ಎಸ್​ಡಿಎಂಸಿ ಅಧ್ಯಕ್ಷ ಕೆರಿಯಾ ಆರ್ ನಾಯ್ಕ, ಆರೋಗ್ಯ ರಕ್ಷ ಸಮಿತಿ ಉಪಾಧ್ಯಕ್ಷ ಬಾಲಕೃಷ್ಣ ನಾಯ್ಕ ಕತ್ತಿ, ಸೇವಾ ಸಹಕಾರಿ ಸಂಘದ ಮಾಜಿ ನಿರ್ದೇಶಕ ಕೆ.ಆರ್. ನಾಯ್ಕ, ಕರಾಟೆ ಶಿಕ್ಷಕ ಪುನಿತ ನಾಯ್ಕ, ಕಸಾಪ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ ಶಿರಳಗಿ ಇತರರಿದ್ದರು. ಚಿತ್ರಕಲೆ ಸ್ಪರ್ಧೆ ವಿಜೇತರಿಗೆ ಬಹುಮಾನ, ಕವನ ವಾಚನ ಮಾಡಿದ ಮಕ್ಕಳಿಗೆ ಹಾಗೂ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು.

ಶಿಬಿರದ ಸಂಯೋಜಕ ಪ್ರಶಾಂತ ಶೇಟ್ ಸ್ವಾಗತಿಸಿದರು. ಸಂಸ್ಥೆಯ ಸಂಯೋಜಕ ಸುರೇಶ ಕಡಕೇರಿ ನಿರೂಪಿಸಿದರು. ಸಹ ಸಂಯೋಜಕ ಟಿ. ಕೆ. ಎಂ. ಆಜಾದ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net