

ತಿಪಟೂರು: ಅನುಮಾನ, ಅವಮಾನ ಎಲ್ಲವನ್ನು ಎದುರಿಸಿ ನಿಂತಮೇಲೆ ಸನ್ಮಾನ ದೊರೆಯುತ್ತದೆ. ವಿದ್ಯಾರ್ಥಿಗಳು ಇವುಗಳಿಗೆ ಅಂಜದೆ ರ್ನಿದಿಷ್ಟ್ಟ ಗುರಿಯೊಂದಿಗೆ ಮುನ್ನಡೆದರೆ ಯಶಸ್ಸು ನಿಮ್ಮದಾಗುತ್ತೆ ಎಂದು ಹಾಸ್ಯ ಸಾಹಿತಿ ರಿಚರ್ಡ್ ಲೂಯಿಸ್ ಹೇಳಿದರು.
ನಗರದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸತಿಕ ಸಂಘದ 24 ವರ್ಷದ ವಾರ್ಷಿಕೋತ್ಸವ ಹಾಗೂ ಭಾವಗೀತೆ ಗಾಯನ, ಕನ್ನಡ ಸಾಹಿತ್ಯ ಕಲ್ಪತರು ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಕಲ್ಪತರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಕಲ್ಪತರು ನಾಡು ಕಲೆ, ಸಾಹಿತ್ಯ ಹಾಗೂ ರಂಗಕಲೆಯ ತವರೂರುವಾಗಿದೆ. ಬಹುತ್ವದಲ್ಲಿ ಏಕತೆಯನ್ನು ಕಾಣವ ಗುಣ ನಮ್ಮ ಮಣ್ಣಿನಲ್ಲಿದೆ. ಎಲ್ಲರನ್ನು ಪ್ರೀತಿಯಿಂದ ಕಂಡಾಗ ನಮ್ಮಲ್ಲಿ ವೈಷಮ್ಯ ದೂರವಾಗುತ್ತವೆ ಎಂದರು.
ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾತನಾಡಿ, ಈ ಸಂಘ ನಾಡಿನ ಕಲೆ, ಸಂಸತಿ ಹಾಗೂ ಪರಂಪರೆಯ ಉಳಿವಿಗೆ ಕಾರ್ಯ ನಿರ್ವಹಿಸುತ್ತಿದೆ. ಕವಿ, ಸಾಹಿತಿ ಮತ್ತು ಪತ್ರಕರ್ತರಂತೆ ಅನೇಕ ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಿರುವುದು ನಿಜಕ್ಕೂ ಸ್ಫೂರ್ಥಿದಾಯಕವಾಗಿದೆ. ಜನಸಾಮಾಜಿಕ ಜವಾಬ್ದಾರಿಗಳಿಂದ ವಿಮುಖರಾಗುತ್ತಿರುವ ಕಾಲದಲ್ಲಿ ಕೆಲವು ಸಂಘಗಳು ಸಾಮಾಜಿಕ ಜವಾಬ್ದಾರಿಯಿಂದ ನಾಡಿದ ಸಾಹಿತ್ಯ ಸಂಪತ್ನ ರಕ್ಷಣೆಗಾಗಿ ಕಾರ್ಯ ಮಾಡುತ್ತಿವೆ. 24 ವರ್ಷ ಪೂರೈಸಿ ಮುನ್ನಡೆಯುತ್ತಿರುವ ಸಂಘ ಶತದಿನ ಪೂರೈಸಲಿ. ಕಲೆ, ಸಾಹಿತ್ಯ, ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರವಾದ ಜನಮನ್ನಣೆ ಪಡೆದಿರುವ ಈ ಸಂ ಕಲ್ಪತರು ನಾಡಿಗೆ ಹೆಚ್ಚಿನ ಸೇವೆ ಮಾಡಲಿ ಎಂದು ಕರೆ ನೀಡಿದರು.
ಅಂಕಣಕಾರ ಪಿ.ರಾಜೇಂದ್ರಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಕಲೆ ಸಾಹಿತ್ಯದ ನಿಜವಾದ ಸೊಗಡು ಕಾಣಬಹುದು. ಕೃತಕಬುದ್ಧಿಮತೆಯ ಕಾಲಘಟ್ಟದಲ್ಲಿ ಕನ್ನಡ ಅಳಿದು ಹೋಗಿತ್ತಿದೆ ಎನ್ನುವ ಆತಂಕ ಎದುರಾಗಿದೆ. ಬದಲಾಗುವ ಕಾಲಘಟ್ಟಕ್ಕೆ ತಕ್ಕಂತೆ ತಾಂತ್ರಿಕತೆ ಜತೆಗೆ ಮುಂದುವರಿಯುವ ಅಗತ್ಯವಿದೆ. ಕನ್ನಡಿಗರು ಕನ್ನಡ ಭಾಷೆೆಯಲ್ಲಿ ಹೊಸ ಹೊಸ ತಂತ್ರಜ್ಞಾನ ಹಾಗೂ ಆವಿಷ್ಕಾರಗಳನ್ನ ಪರಿಚಯಿಸಬೇಕು. ಇಂಗ್ಲಿಷ್ಗೆ ಸರಿಸಮವಾಗಿ ಕನ್ನಡ ತಂತ್ರಜ್ಞಾನ ಅಭಿವೃದ್ಧಿ ಹೊಂದಿದ್ದಾಗ ಮಾತ್ರ ಜಾಗತೀಕವಾಗಿಸವಾಲು ಎದುರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಂಘದ ಸಂಸ್ಥಾಪಕ ಎನ್.ಬಾನುಪ್ರಶಾಂತ್ ಮಾತನಾಡಿ, ಸಮಾನ ಮನಸ್ಥತಿ ಉಳ್ಳವರು ಸೇರಿ ನಾಡಿನ ಕಲೆ, ಸಾಹಿತ್ಯ ಸಂಸತಿ ಪರಂಪರೆಯ ಉಳಿವು, ಪರಿಸರ ರಕ್ಷಣೆಯಲ್ಲಿ ತೋಡಗಬೇಕು ಎಂದರು.
ನಗರಸಭೆ ಅಧ್ಯಕ್ಷೆ ಮೇಘಶ್ರೀ ಭೂಷಣ್. ಡಾ. ಶ್ರೀಧರ್, ತಹಸಿಲ್ದಾರ್ ಜಿ.ವಿ. ಮೋಹನ್ ಕುಮಾರ್, ಎಸ್.ಕೆ.ಜಗನ್ನಾಥ್, ಸುದರ್ಶನ್, ಡಾ.ಸುರೇಶ್, ಬಸವರಾಜು, ಸಂಘದ ಅಧ್ಯಕ್ಷ ನಾಗರಾಜು, ಪ್ರೊ.ರೇಣುಕಯ್ಯ, ಶಾಮಸಂದರ್, ಸಾಹಿತಿ ನಾಗರಾಜ ಶೆಟ್ಟಿ ಉಪಸ್ಥಿತರಿದರು.