ಪ್ರಾಮಾಣಿಕತೆ, ನಿಷ್ಠೆಯ ಕೆಲಸದಿಂದ ಯಶಸ್ಸು ಖಚಿತ

LION
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಪ್ರಾಮಾಣಿಕತೆ, ಶ್ರಮ, ನಿಷ್ಠೆಯಿಂದ ಕೆಲಸ ಮಾಡಿದರೆ ಖಂಡಿತ ಯಶಸ್ಸು ಸಿಗುತ್ತದೆ ಎಂದು ಲಯನ್ಸ್ ಪ್ರಾಂತೀಯ ಅಧ್ಯಕ್ಷ ಬೇಳಂಜೆ ಹರೀಶ್ ಪೂಜಾರಿ ಹೇಳಿದರು. ಹೆಬ್ರಿ ಕುಚ್ಚೂರು ರಸ್ತೆಯ ಪರಿಮಳ ಲೇಔಟ್‌ನಲ್ಲಿ ಬೇಳಂಜೆ ಜಗನ್ನಾಥ ಪೂಜಾರಿ ವೇದಿಕೆಯಲ್ಲಿ ಲಯನ್ಸ್ ಜಿಲ್ಲೆ 317 ಸಿ ಪ್ರಾಂತ್ಯ 4ರ ಲಯನ್ಸ್ ಪ್ರಾಂತೀಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲಯನ್ಸ್ ಪ್ರಾಂತೀಯ ಪ್ರಥಮ ಮಹಿಳೆ ಸುಜಾತ ಹರೀಶ್ ಪೂಜಾರಿ ಉದ್ಘಾಟಿಸಿದರು. ಉಪನ್ಯಾಸಕ ಡಾ.ಯೋಗೀಶ್ ಕೈರೋಡಿ, ಉದ್ಯಮಿ ಪ್ರಸಾದ್ ಪಿ.ಶೆಟ್ಟಿ ಬೇಳಂಜೆ, ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಆರ್.ಸುಬ್ರಹ್ಮಣ್ಯ, ಲಯನ್ಸ್ ಪ್ರಥಮ ಉಪ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್, ದ್ವಿತೀಯ ಉಪ ಜಿಲ್ಲಾ ಗವರ್ನರ್ ರಾಜೀವ ಕೋಟ್ಯಾನ್, ಮಾಜಿ ಲಯನ್ಸ್ ಗವರ್ನರ್, ಪ್ರಾಂತ್ಯ ಸಲಹೆಗಾರ ಎನ್.ಎಂ.ಹೆಗ್ಡೆ, ಎಲ್‌ಸಿಐಎಫ್ ಮುಖ್ಯ ಸಂಯೋಜಕ ಹರಿಪ್ರಸಾದ್ ರೈ, ಪ್ರಾಂತೀಯ ಕಾರ್ಯದರ್ಶಿ ಥೋಮಸ್ ಲುಕೋಸ್, ಸಂಪುಟ ಕಾರ್ಯದರ್ಶಿ ಗಿರೀಶ್ ರಾವ್, ವಲಯಾಧ್ಯಕ್ಷರಾದ ಪ್ರಕಾಶ ಶೆಟ್ಟಿ, ರಘುರಾಮ ಶೆಟ್ಟಿ, ಶಾಕೀರ್ ಹುಸೇನ್, ವಿವಿಧ ಪ್ರಾಂತ್ಯಗಳ ಅಧ್ಯಕ್ಷರು, ಹಿರಿಯ ಲಯನ್ಸ್ ಪ್ರಮುಖರು, ಸಮ್ಮೇಳನ ಸಮಿತಿ ಅಧ್ಯಕ್ಷ ವಾದಿರಾಜ ಶೆಟ್ಟಿ, ಗೌರವಾಧ್ಯಕ್ಷ ಟಿ.ಜಿ.ಆಚಾರ್ಯ, ಮುಖ್ಯ ಸಲಹೆಗಾರರಾದ ಡಾ.ಭಾರ್ಗವಿ ಆರ್.ಐತಾಳ್, ಎಚ್.ದಿನಕರ ಪ್ರಭು, ಕಾರ್ಯದರ್ಶಿ ಕೆ.ಕೃಷ್ಣ ಶೆಟ್ಟಿ, ಕೋಶಾಧಿಕಾರಿ ರವೀಂದ್ರನಾಥ ಶೆಟ್ಟಿ, ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷ ಸೀತಾನದಿ ನಾಗೇಶ ನಾಯಕ್, ಕಾರ್ಯದರ್ಶಿ ನಾಡ್ಪಾಲು ಹರೀಶ ಶೆಟ್ಟಿ, ಲಿಯೋ ಅಧ್ಯಕ್ಷ ದರ್ಶನ್ ಶೆಟ್ಟಿ, ಕೋಶಾಧಿಕಾರಿ ಆಶಾ ಬಿ. ಶೆಟ್ಟಿ ಅತಿಥೇಯ ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಸದಸ್ಯರು, ವಿವಿಧ ಗಣ್ಯರು ಉಪಸ್ಥಿತರಿದ್ದರು. ಹೆಬ್ರಿ ಸಿಟಿ ಲಯನ್ಸ್ ಕ್ಲಬ್‌ನ ಸ್ನೇಹಲತಾ ಟಿ.ಜಿ. ಮತ್ತು ಪ್ರಕಾಶ ಪೂಜಾರಿ ಮಾತಿಬೆಟ್ಟು ನಿರೂಪಿಸಿದರು. ವಾದಿರಾಜ ಶೆಟ್ಟಿ ಸ್ವಾಗತಿಸಿದರು. ವಕೀಲ ಕೃಷ್ಣ ಶೆಟ್ಟಿ ವಂದಿಸಿದರು.

ಆಕರ್ಷಕ ಬ್ಯಾನರ್ ಪ್ರದರ್ಶನ ಪ್ರಶಸ್ತಿ

ಆಕರ್ಷಕ ಬ್ಯಾನರ್ ಪ್ರದರ್ಶನದಲ್ಲಿ ಹಿರಿಯಡ್ಕ ಲಯನ್ಸ್ ಕ್ಲಬ್ ಪ್ರಥಮ, ಬೆಳ್ಮಣ್ ಮತ್ತು ಬೆಳ್ಮಣ್ ಸೆಂಚುರಿ ಲಯನ್ಸ್ ಕ್ಲಬ್ ದ್ವಿತೀಯ ಹಾಗೂ ಪೇತ್ರಿ ಲಯನ್ಸ್ ಕ್ಲಬ್ ತೃತೀಯ ಪ್ರಶಸ್ತಿ ಪಡೆಯಿತು. ಪೂರ್ಣ ಹಾಜರಾತಿಯಲ್ಲಿ ಹಿರಿಯಡ್ಕ ಲಯನ್ಸ್ ಪ್ರಥಮ, ಅಜೆಕಾರು ಲಯನ್ಸ್ ಕ್ಲಬ್ ದ್ವಿತೀಯ ಪ್ರಶಸ್ತಿ ಪಡೆಯಿತು. ನಿವೃತ್ತ ಯೋಧ ಪ್ರಸನ್ನ ಸೋಮೇಶ್ವರ ಚಾರ ನವೋದಯ ವಿದ್ಯಾಲಯದ ಎನ್‌ಸಿಸಿ ಕೆಡೆಟ್‌ಗಳ ಜತೆಗೂಡಿ ತಂದ ರಾಷ್ಟ್ರಧ್ವಜಕ್ಕೆ ಹೆಬ್ರಿ ಲಯನ್ಸ್ ಕ್ಲಬ್ ಸಂಸ್ಥಾಪಕ ದಿನಕರ ಪ್ರಭು ಧ್ವಜವಂದನೆ ಸಲ್ಲಿಸಿದರು.

ಸನ್ಮಾನ, ಧನಸಹಾಯ, ಕೊಡುಗೆ

ಪ್ರಾಂತೀಯ ಅಧ್ಯಕ್ಷ ಬೇಳಂಜೆ ಹರೀಶ್ ಪೂಜಾರಿ, ಸುಜಾತ ಹರೀಶ್, ಸಮ್ಮೇಳನ ಸಮಿತಿ ಮತ್ತು ಅತಿಥೇಯ ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಪದಾಧಿಕಾರಿಗಳು, ಲಯನ್ಸ್ ಪ್ರಮುಖರು, ವಿವಿಧ ಗಣ್ಯರು ಹಾಗೂ ಸಮಾಜ ಸೇವಕ, ಛಾಯಾಗ್ರಾಹಕ ದಿವಾಕರ ಶೆಟ್ಟಿ ಕುಚ್ಚೂರು, ಪ್ರಗತಿಪರ ಕೃಷಿಕೆ ಸೀತಾನದಿ ವಸಂತಿ ಶೆಟ್ಟಿ, ನಿವೃತ್ತ ದಂತ ತಂತ್ರಜ್ಞ ಶರತ್ ಕುಮಾರ್ ಹೆಗ್ಡೆ ಸಹಿತ ಹವಲರಿಗೆ ಸನ್ಮಾನ ನಡೆಯಿತು. ಬಡ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಧನಸಹಾಯ, ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕೊಡುಗೆ, ಆರೋಗ್ಯ ಸಹಾಯಧನ ವಿತರಣೆ ನಡೆಯಿತು.

ಜಗತ್ತಿನ ದೊಡ್ಡ ಸ್ವಯಂಸೇವಾ ಸಂಸ್ಥೆಯಾಗಿರುವ ಲಯನ್ಸ್‌ನಿಂದ ಬಾಂಧವ್ಯ ವೃದ್ಧಿಯಾಗುತ್ತದೆ, ಜನಸೇವೆಯಿಂದ ಸಂಬಂಧಗಳು ಬೆಳೆಯುತ್ತವೆ, ಸರ್ವರ ಸೇವೆಗೆ ಲಯನ್ಸ್ ಅತ್ಯುತ್ತಮ ಸಂಸ್ಥೆ. -ಸುಜಾತ ಹರೀಶ್ ಪೂಜಾರಿ ಲಯನ್ಸ್ ಪ್ರಾಂತೀಯ ಪ್ರಥಮ ಮಹಿಳೆ https://www.vijayavani.net/everyone-is-involved-in-srinivasa-kalyan https://www.vijayavani.net/sri-manmaharatsava-at-kabbinale-temple

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net