ಪರಿಶ್ರಮದಿಂದ ಓದಿದರೆ ಯಶಸ್ಸು ಖಚಿತ

4Anand1
ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ರೂಪಾ ಚನಗೌಡ ಪಾಟೀಲ ಸತ್ಕಾರಿಸಲಾಯಿತು. ನಾಗರಾಜ್​ ಆರ್​, ಚಂದ್ರಶೇಖರ ಸುಖಸಾರೆ, ಎಂ.ಎಸ್​.ಚೌಗಲಾ, ವೈಜಯಂತಿ.ಎಂ.ಚೌಗಲಾ, ಸುಶೀಲಾ ಪಾಟೀಲ ಇತರರಿದ್ದರು.
Published on

ಬೆಳಗಾವಿ: ಸರ್ಕಾರಿ ಶಾಲೆ ಎಂಬ ತಾತ್ಸಾರ ಬಿಟ್ಟು ಪರಿಶ್ರಮದಿಂದ ಓದಿದರೆ ಯಶಸ್ಸು ಖಚಿತ ಎಂದು ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ರೂಪಾ ಚನಗೌಡ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಮಹಾಂತೇಶ ನಗರದ ಮಹಿಳಾ ಕಲ್ಯಾಣ ಸಂಸ್ಥೆ ಸಭಾಂಗಣದಲ್ಲಿ ಶನಿವಾರ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದಿಂದ ಆಯೋಜಿಸಿದ್ದ ಸತ್ಕಾರ ಸ್ವೀಕರಿಸಿ ರೇಡಿಯೋ ಸಂದರ್ಶನ ನೀಡಿ ಅವರು ಮಾತನಾಡಿ, ಕಾನ್ವೆಂಟ್​ ಶಾಲೆಗಳಲ್ಲಿ ಸಿಗದ ಕೆಲವು ಸೌಲಭ್ಯಗಳು ಈಗ ಸರ್ಕಾರಿ ಶಾಲೆಗಳಲ್ಲಿ ಸಿಗುತ್ತಿವೆ. ನಾನು ಕೂಡ ಅಂತಹ ಶಾಲೆ ವಿದ್ಯಾರ್ಥಿನಿ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಅನಿಸುತ್ತಿದೆ ಎಂದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗರಾಜ್​ ಆರ್​, ಪ್ರಭಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ ಸುಖಸಾರೆ ಮಹಿಳಾ ಕಲ್ಯಾಣ ಸಂಸ್ಥೆ ಸಂಸ್ಥಾಪಕ ಎಂ.ಎಸ್​.ಚೌಗಲಾ, ಮಹಿಳಾ ಕಲ್ಯಾಣ ಸಂಸ್ಥೆ ಗೌರವ ಕಾರ್ಯದರ್ಶಿ ವೈಜಯಂತಿ.ಎಂ.ಚೌಗಲಾ, ಸ.ಹಿ.ಪ್ರಾ.ಶಾಲೆ ಚಿಕ್ಕ ಹಟ್ಟಿಹೋಳಿಯ ಮುಖ್ಯೋಪಾಧ್ಯಾಯ ಸುಶೀಲಾ ಪಾಟೀಲ, ನಮ್ಮೂರ ಬಾನುಲಿ ರೇಡಿಯೋ ಕೇಂದ್ರದ ಸಿಬ್ಬಂದಿ ಆರ್​ಜೆ ಮೀರಾ ಹಾಗೂ ಚೇತನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net