ಧನಾತ್ಮಕ ಚಿಂತನೆಯಿಂದ ಯಶಸ್ಸು ಸಾಧ್ಯ, ಸಂತ ತೆರೆಜಾ ಚರ್ಚಿನಲ್ಲಿ ಯುವೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಧರ್ಮಗುರು ಆಲ್ಬನ್ ಡಿಸೋಜಾ

mng_4 nov youvosthava
ಮಂಗಳೂರಿನ ಸಂತ ತೆರೆಜಾ ಚರ್ಚಿನ ಐ.ಸಿ.ವೈ.ಎಂ. ಘಟಕದ ಸಹಯೋಗದಲ್ಲಿ ನಡೆದ ಯುವೋತ್ಸವ ಕಾರ್ಯಕ್ರಮವನ್ನು ಮಂಗಳೂರಿನ ಸಂತ ತೆರೆಜಾ ಚರ್ಚಿನ ಚರ್ಚಿನ ಪ್ರಧಾನ ಧರ್ಮಗುರು ಆಲ್ಬನ್ ಡಿಸೋಜಾ ಉದ್ಘಾಟಿಸಿದರು.
Published on

ಮಂಗಳೂರು: ವಿದ್ಯಾರ್ಥಿಗಳು ಶಿಸ್ತು ಹಾಗೂ ಗುಣಮಟ್ಟದ ಶಿಕ್ಷಣವನ್ನು ಕಾಯ್ದುಕೊಳ್ಳುವುದರ ಜೊತೆಗೆ ಧನಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಂಡಾಗ ಯಶಸ್ಸನ್ನು ಗಳಿಸಬಹುದು. ವಿದ್ಯಾರ್ಥಿಗಳು ಪಠ್ಯಾಧ್ಯಯನದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಭವಿಷ್ಯ ರೂಪಿಸಿಕೊಳ್ಳುವ ಮಹತ್ವದ ಜವಾಬ್ದಾರಿಯನ್ನು ಹೊಂದಿರಬೇಕು ಎಂದು ಮಂಗಳೂರಿನ ಸಂತ ತೆರೆಜಾ ಚರ್ಚಿನ ಚರ್ಚಿನ ಪ್ರಧಾನ ಧರ್ಮಗುರು ಆಲ್ಬನ್ ಡಿಸೋಜಾ ಹೇಳಿದರು.

ಮಂಗಳೂರಿನ ಸಂತ ತೆರೆಜಾ ಚರ್ಚಿನ ಐ.ಸಿ.ವೈ.ಎಂ. ಘಟಕದ ಸಹಯೋಗದಲ್ಲಿ ಚರ್ಚಿನ ಸಭಾಗಂಣದಲ್ಲಿ ಯುವೋತ್ಸವ 2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಒಗ್ಗಟ್ಟು ಬಲಗೊಳ್ಳುತ್ತದೆ. ಶಿಕ್ಷಣದ ಹಲವು ಮಜಲುಗಳು ಸಮಗ್ರ ಜ್ಞಾನಾಭಿವೃದ್ಧಿಗೆ ಸಹಕರಿಸುತ್ತದೆ. ಅದಕ್ಕಾಗಿಯೇ ಕಾಲೇಜು ನಾನಾ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳು ತಮ್ಮನ್ನ ತಾವು ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ವಿವೇಚನಾಶೀಲತೆಯು ಮಾನವನ ಭವಿಷ್ಯವನ್ನು ನಿರ್ಧರಿಸಬಲ್ಲುದು. ದೃಢನಿರ್ಧಾರ ಮತ್ತು ಯೋಜನಾಬದ್ಧ ತಯಾರಿಯು ನಮ್ಮನ್ನು ಯಶಸ್ಸಿನೆಡೆಗೆ ಕೊಂಡೊಯ್ಯಬಲ್ಲ ಪ್ರಮುಖ ಸಾಧನಗಳು ಎಂದರು.

ಚರ್ಚಿನ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಸರ್ವ ಆಯೋಗದ ಅಂಚಾಲಕ ಜೊಸ್ಲಿನ್ ಲೋಬೊ, ವಿನೀತ ಡಿಕೋಸ್ತ, ಐ.ಸಿ.ವೈ.ಎಂ. ನ ಎನಿಮೇಟರ್ ರೋಶನ್ ಮೊಂತೆರೋ ಇದ್ದರು.

ಸಂಘದ ಅಧ್ಯಕ್ಷ ವಿಲ್ಸನ್ ಡಿಸೋಜಾ ಸ್ವಾಗತಿಸಿದರು, ಕಾರ್ಯದರ್ಶಿ ರಾಯನ್ ವಂದಿಸಿದರು. ರೀಶಾಲ್ ಡಿಸೋಜಾ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net