ಭಾಷಾ ಕೌಶಲ್ಯದಿಂದ ಜೀವನದಲ್ಲಿ ಯಶಸ್ಸು

07-10-Shiva-5
ರಾಯಚೂರಿನ ಎಲ್‌ವಿಡಿ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಆಂಜಿನೇಯ ಉದ್ಘಾಟಿಸಿದರು. ಉಪನ್ಯಾಸಕರಾದ ಡಾ.ಅರುಣಾ ಹಿರೇಮಠ, ಡಾ.ಏಕೇಶ್ವರಿ ರಾಠೋಡ, ಡಾ.ಶಾಂತಲಾ ಮುಕ್ಕುಂದಿಮಠ, ಉಮಾ ಮಹೇಶ್ವರಿ ಇದ್ದರು.
Published on

ರಾಯಚೂರು: ನಮ್ಮ ಸಾಮಾಜಿ, ವೃತ್ತಪರ ಮತ್ತು ವೈಯಕ್ತಿಕ ಜೀವನದಲ್ಲಿ ಯಶಸ್ಸು ಸಾಸುವಲ್ಲಿ ಭಾಷಾ ಕೌಶಲ್ಯ ಪ್ರಮುಖ ಪಾತ್ರ ವಹಿಸುತ್ತಿದ್ದು, ಜತೆಗೆ ಉತ್ತಮ ಸಂವಹನ, ಯೋಚನೆಯ ಸಾಮರ್ಥ್ಯವನ್ನು ನೀಡುತ್ತದೆ ಎಂದು ಎಲ್‌ವಿಡಿ ಕಾಲೇಜು ಪ್ರಭಾರಿ ಪ್ರಾಚಾರ್ಯ ಡಾ.ಆಂಜಿನೇಯ ಹೇಳಿದರು.
ಸ್ಥಳೀಯ ಎಲ್‌ವಿಡಿ ಕಾಲೇಜಿನಲ್ಲಿ ಭಾಷಾ ವೇದಿಕೆಯಿಂದ ಶನಿವಾರ ಏರ್ಪಡಿಸಿದ್ದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾತನಾಡುವುದು, ಓದುವುದು, ಬರೆಯುವುದು ಭಾಷಾ ಕೌಶಲ್ಯಗಳ ಜತೆಗೆ ಜೀವನದಲ್ಲಿ ಶಿಸ್ತು, ಕಲಿಕೆ ಅತ್ಯಗತ್ಯವಾಗಿದೆ ಎಂದರು.
ವಿದ್ಯಾರ್ಥಿ ಜೀವನದಲ್ಲಿ ಯಶಸ್ವಿಯಾದರೆ ಮಾತ್ರ ಜೀವನದಲ್ಲಿ ಹೊಸ ಅವಕಾಶಗಳು ಅರಸಿ ಬಂದಾಗ ಎಲ್ಲ ಕ್ಷೇತ್ರಗಳ್ಲಲಿ ಪ್ರಗತಿ ಸಾಧ್ಯವಾಗುತ್ತದೆ. ಹೀಗಾಗಿ ವಿದ್ಯಾರ್ಥಿ ಜೀವನವನ್ನು ಆಸಕ್ತಿ, ಉತ್ಸಾಹದಿಂದ ಕಳೆಯಬೇಕು ಎಂದು ಹೇಳಿದರು.
ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಡಾ.ಅರುಣಾ ಹಿರೇಮಠ ಮಾತನಾಡಿ, ಭಾಷೆಯನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಭಾಷಾ ಕೌಶಲ್ಯವಾಗಿದ್ದು, ವಿದ್ಯಾರ್ಥಿ ಒಂದು ಭಾಷೆಯನ್ನು ಕಲಿತು ಉಳಿದ ಭಾಷೆಗಳ ಮೇಲೆ ಹಿಡಿತವಿಲ್ಲದಿದ್ದರೆ ಭಾಷಾ ಕೌಶಲ್ಯ ಅಪೂರ್ಣವಾಗಿ ಉಳಿಯುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಎಲ್ಲ ಭಾಷೆಗಳನ್ನು ಕಲಿಯುವುದರ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.
ಉಪನ್ಯಾಸಕಿ ಉಮಾ ಮಹೇಶ್ವರಿ ಮಾತನಾಡಿ, ಪ್ರತಿಯೊಬ್ಬರಿಗೂ ತನ್ನದೇ ಆಲೋಚನೆ ಮತ್ತು ಭಾವನೆಗಳನ್ನು ವ್ಯಕ್ತಪಡಿಸಲು ಮಾಧ್ಯಮದ ಅಗತ್ಯವಿರುತ್ತದೆ. ಭಾಷೆ ಅದಕ್ಕೆ ಅರ್ಥಪೂರ್ಣ ಮಾಧ್ಯಮವಾಗಿದ್ದು, ಭಾಷೆಯ ಬಳಕೆ ಮೇಲೆ ಹಿಡಿತ ಹೊಂದಿದ್ದಾಗ ಮಾತ್ರ ಉತ್ತಮ ಸಂವಹನ ಸಾಧ್ಯವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ.ಏಕೇಶ್ವರಿ ರಾಠೋಡ, ಡಾ.ಶಾಂತಲಾ ಮುಕ್ಕುಂದಿಮಠ ಹಾಗೂ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net