ಶಿಕ್ಷಣದಿಂದ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ

Success in life is possible only through education
ಗುಳೇದಗುಡ್ಡದಲ್ಲಿ ಬಾಲಕರ ಪಪೂ ಕಾಲೇಜಿನ ಪ್ರೌಢಶಾಲೆ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಅಧಿಕಾರಿಗಳು, ಗಣ್ಯರು ಉದ್ಘಾಟಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ. ದೊಡ್ಡಪ್ಪನವರ, ಪ್ರಾಚಾರ್ಯ ಎಂ. ಪಿ. ಮಾಗಿ, ಎಸ್‌ಡಿಎಂಸಿ ಉಪಾಧ್ಯಕ್ಷ ಶ್ರೀನಿವಾಸ ಇನಾನಿ, ಸದಸ್ಯರಾದ ಚಂದಪ್ಪ ಬಂಡಿವಡ್ಡರ ಇತರರಿದ್ದರು.
Published on

ಗುಳೇದಗುಡ್ಡ: ಇಂದಿನ ತಂತ್ರಜ್ಞಾನದ ಪೈಪೋಟಿ ಯುಗದಲ್ಲಿ ಉತ್ತಮ ಶಿಕ್ಷಣ ಪಡೆದು, ಉನ್ನತ ಸ್ಥಾನ ಪಡೆದರೆ ಮಾತ್ರ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ದೊರೆಯುತ್ತದೆ. ವಿದ್ಯಾರ್ಥಿಗಳು ದುಶ್ಚಃಟಗಳಿಂದ ದೂರವಿದ್ದು, ಶಿಕ್ಷಕರ ಮಾರ್ಗದರ್ಶನದಲ್ಲಿ ಓದಿನ ಕಡೆಗೆ ಗಮನ ನೀಡಬೇಕೆಂದು ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ. ದೊಡ್ಡಪ್ಪನವರ ಹೇಳಿದರು.

ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್‌ಎಸ್‌ಎಲ್‌ಸಿ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಒಂದು ಉತ್ತಮ ಗುರಿ ಇಟ್ಟುಕೊಂಡು ಆ ಗುರಿ ತಲುಪಲು ಶ್ರದ್ಧೆ, ಸತತ ಪರಿಶ್ರಮಪಡಬೇಕು ಎಂದರು. ಉಪ ಪ್ರಾಚಾರ್ಯ ಎಂ. ಪಿ. ಮಾಗಿ, ಎಸ್‌ಡಿಎಂಸಿ ಉಪಾಧ್ಯಕ್ಷ ಶ್ರೀನಿವಾಸ ಇನಾನಿ, ಸದಸ್ಯರಾದ ಚಂದಪ್ಪ ಬಂಡಿವಡ್ಡರ, ಶಶಿಧರ ಹಾದಿಮನಿ, ಸಿಕಂದರ ಇಲಕಲ್ಲ, ಯಮನೂರ ಪೂಜಾರಿ, ಮಲ್ಲನಗೌಡ ಪಾಟೀಲ, ವಿರೂಪಾಕ್ಷ ದೇವರಮನಿ, ತಿಮ್ಮಣ್ಣ ಬಂಡಿವಡ್ಡರ, ಪ್ರೊ. ಸಿದ್ದಲಿಂಗಪ್ಪ ಬರಗುಂಡಿ, ಸತ್ಯಪ್ಪ ಜೋಗಿನ, ವೈ. ಆರ್. ಹೆಬ್ಬಳ್ಳಿ. ಎ್. ಎ. ಸೊಲ್ಲಾಪುರಕರ, ಬಿ.ಕೆ. ಹಿರೇಮಠ, ಎಸ್.ವಿ. ಕಟ್ಟಿ, ಎಂ.ಜೆ. ಬೆಳಗಲ್ಲ, ಪಿ. ಎಂ. ಹಿರೇಮಠ, ಜೆ.ಬಿ. ಕೋವಳ್ಳಿ, ಯು.ಎಂ. ಫೀರಜಾದೆ, ವಿದ್ಯಾರ್ಥಿಗಳ ಪ್ರತಿನಿಧಿ ಕೃಷ್ಣಾ ಭೀಮನಪಲ್ಲೆ, ನೂರಜಹಾನ್ ಮೋಮಿನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net