ವಚನಗಳ ಪಾಲನೆಯಿಂದ ಜೀವನದಲ್ಲಿ ಯಶಸ್ಸು

12 NRD-2
Published on

ನರಗುಂದ: ಸಂಸಾರದಲ್ಲಿ ಸಮಚಿತ್ತವಾಗಿದ್ದರೆ ಕುಟುಂಬಗಳು ನೆಮ್ಮದಿಯ ಜೀವನ ನಡೆಸುತ್ತವೆ. ಭಾವದಲ್ಲಿ ಉತ್ತಮ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಧಾರವಾಡ ಪ್ರಾಧ್ಯಾಪಕ ಡಾ. ಶಂಭು ಹೆಗಡಾಳ ಹೇಳಿದರು.

ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಭಾನುವಾರ ನಡೆದ 7ನೇ ದಿನದ ವಚನಾಮೃತ ಶ್ರಾವಣ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು. ಸಂಸ್ಕಾರಯುತವಾಗಿ ಮನುಷ್ಯ ಬದುಕಲು ಕಲಿತಾಗ ಅದಕ್ಕೊಂದು ಅರ್ಥವಿದೆ. ಹೀಗಾಗಿ ಬಸವಣ್ಣ ಮತ್ತು ಅನೇಕ ಧೀಮಂತರು ನೀಡಿದ ವಚನಗಳ ಪಾಲನೆ ಮುಖ್ಯ ಎಂದರು. ಶರಣ ಸಂಸ್ಕೃತಿ ಜ್ಞಾನ ವಚನ ಸಾಹಿತ್ಯಕ್ಕೆ ಮೆರುಗು ನೀಡಿದೆ. ಶರಣರ ವಚನಗಳ ಪಾಲನೆಯಿಂದ ಜೀವನದಲ್ಲಿ ಯಶಸ್ಸು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಬಂಡಾಯ ಸಾಹಿತಿ ಮಾರುತಿ ಬೋಸಲೆ ಮಾತನಾಡಿ, ಜಂಜಾಟದಲ್ಲಿ ಅನೇಕರ ಬದುಕು ನಾಶವಾಗುತ್ತಿದೆ. ಹೀಗಾಗಿ ಇಂತಹ ಚಿಂತನೆಗಳನ್ನು ದೂರಗೊಳಿಸಿ ಭಕ್ತಿ ಪರಂಪರೆಗೆ ನಾವೆಲ್ಲ ಮುಂದಾದಲ್ಲಿ ಜೀವನದಲ್ಲಿ ಸಾಮರಸ್ಯ ಹೊಂದುವುದು ಸುಗಮವಾಗುತ್ತದೆ ಎಂದರು.

ಕದಳಿ ಮಹಿಳಾ ವೇದಿಕೆ ತಾಲೂಕಾಧ್ಯಕ್ಷೆ ಲೀಲಕ್ಕ ಹಸಬಿ, ಸುಕನ್ಯಾ ಸಾಲಿ, ಗಂಗಮ್ಮ ಪಾಟೀಲ, ಮಂಗಳಾ ಪಾಟೀಲ, ಜೆ.ಆರ್. ಕದಂ, ಎಸ್.ವೈ. ಹುಂಬಿ, ಟಿ.ಆರ್. ಉಳ್ಳಾಗಡ್ಡಿ, ಸಿ.ಎಚ್. ಕೋರಿ, ಎಸ್.ಐ. ಅಂಕಲಿ, ಗಿರೀಶ ಜಂಗಣ್ಣವರ, ಎಂ.ಎಸ್. ಯಾವಗಲ್, ಬಿ.ಎಸ್. ನಾಶಿಶೆಟ್ಟಿ, ವಿ.ಎನ್. ಕೊಳ್ಳಿಯವರ, ಹಾಡಕರ್, ರವಿ ಬ್ಯಾಹಟ್ಟಿ, ಗುರುಪಾದಪ್ಪ ಹಸಬಿ, ಶಾಂತಾ ಮಳಿಮಠ, ಕೆ.ಜಿ. ಮಳಿಮಠ, ಮಲ್ಲಿಕಾರ್ಜುನ ಆಲೂರ, ಎಸ್.ವಿ. ಭಜಂತ್ರಿ, ಸಂಗಪ್ಪ ಪೂಜಾರ, ಪಿ.ಎಸ್. ಅಣ್ಣಿಗೇರಿ, ಸೀಮಣ್ಣ ಗೊವೇಶ್ವರ, ಬಸವರಾಜ ಗೋವೇಶ್ವರ, ಪತ್ರೆಪ್ಪ ಹಡಪದ, ಇತರರು ಉಪಸ್ಥಿತರಿದ್ದರು. ಆರ್.ಬಿ. ಚಿನಿವಾಲರ, ಆರ್.ಎಚ್. ತಿಗಡಿ ಕಾರ್ಯಕ್ರಮ ನಿರ್ವಹಿಸಿದರು. ಬಸವ ಕೇಂದ್ರ, ಶ್ರೀ ಮುರುಘ ರಾಜೇಂದ್ರ ಫ್ರೀ ಬೋರ್ಡಿಂಗ್ ಟ್ರಸ್ಟ್, ಕದಳಿ ಮಹಿಳಾ ಕದಳಿ ವೇದಿಕೆ, ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ವಚನಾಮೃತ ಸಂಗೀತ ಕಾರ್ಯಕ್ರಮ ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net