

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ಮನುಷ್ಯ ಪ್ರಯತ್ನದ ಜತೆಗೆ ದೇವರ ಅನುಗ್ರಹ ಇದ್ದರೆ ಸಂಪೂರ್ಣ ಯಶಸ್ಸು ಸಾಧ್ಯ. ರಾಶಿ ಪೂಜೆಯಲ್ಲಿ ಪಾಲ್ಗೊಂಡವರಿಗೆಲ್ಲರಿಗೂ ನಮ್ಮ ಜೀವನದಲ್ಲಿ ಬರುವ ರಾಶಿ ರಾಶಿ ಕಷ್ಟ ದೂರವಾಗಿ ದೇವರ ಅನುಗ್ರಹ ಪ್ರಾಪ್ತಿಯಾಗಲಿ ಎಂದು ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿ ಹರಸಿದರು. ಮಹಾಸ್ವಾಮಿಗಳವರ ಚಾತುರ್ವಾಸ್ಯ ವ್ರತಾಚರಣೆ ಪರ್ವಕಾಲದಲ್ಲಿ ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠ ಶಾಲೆಯ ಶ್ರೀ ಸರಸ್ವತೀ ಪೂರ್ವಚಾತ್ರ ಸಂದ ನೇತೃತ್ವದಲ್ಲಿ ಶನಿವಾರ ಆರಂಭಗೊಂಡ ದ್ವಾದಶ ರಾಶಿ ಪೂಜೆ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಆನೆಗುಂದಿ ಪ್ರತಿಷ್ಠಾನ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ ವಾತನಾಡಿದರು. ಚಿತ್ರನಟರಾದ ಶಶಿರಾಜ್ ಆಚಾರ್ಯ ಕುತ್ಯಾರು, ರಾಧಾಕೃಷ್ಣ ಆಚಾರ್ಯ ಕುಂಬಳೆ ಅವರನ್ನು ಅಭಿನಂದಿಸಲಾಯಿತು. ಶಾಸಕ ಯಶಪಾಲ್ ಎ.ಸುವರ್ಣ, ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಕುತ್ಯಾರು ನವೀನ್ ಶೆಟ್ಟಿ, ಶಿಲ್ಪಾ ಜಿ.ಸುವರ್ಣ, ವಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಕುತ್ಯಾರು ಗ್ರಾಪಂ ಅಧ್ಯಕ್ಷ ಜನಾರ್ದನ ಆಚಾರ್ಯ ಕುತ್ಯಾರು, ಬೆಂಗಳೂರು ಆನೆಗುಂದಿ ಶಾಖಾ ಮಠ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ಎನ್.ಆಚಾರ್ಯ, ಚಾತುರ್ವಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ.ವಿ.ಗಂಗಾಧರ ಆಚಾರ್ಯ ಉಡುಪಿ, ಪಂಚಸಿಂಹಾಸನ ವಿಕಾಸ ಸಮಿತಿ ಅಧ್ಯಕ್ಷ ದಿನೇಶ್ ಆಚಾರ್ಯ ಪಡುಬಿದ್ರಿ, ವಿವಿಧ ದೇವಸ್ಥಾನಗಳ ಧರ್ಮದರ್ಶಿಗಳಾದ ಬಾಲಕೃಷ್ಣ ಆಚಾರ್ಯ ಮೂಡುಬಿದಿರೆ, ಮಧುಕರ ಚಂದ್ರಶೇಖರ ಆಚಾರ್ಯ ಹೊನ್ನಾವರ, ಬಿ.ಎಂ.ಯದುನಂದನ ಆಚಾರ್ಯ ಬಂಗ್ರಮಂಜೇಶ್ವರ, ಜಗದೀಶ ಆಚಾರ್ಯ, ಗಣೇಶ್ ಆಚಾರ್ಯ ಕೆಮ್ಮಣ್ಣು, ಬೆಳುವಾಯಿ ಸುಂದರ ಆಚಾರ್ಯ ಮಂಗಳೂರು, ಬಿ.ಸೂರ್ಯಕುವಾರ್ ಆಚಾರ್ಯ ಹಳೆಯಂಗಡಿ, ವಾತೃಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಅಚಾರ್ಯ, ಪೂರ್ವ ಛಾತ್ರ ಸಂ ಅಧ್ಯಕ್ಷ ಕೇಶವ ಶರ್ಮ ಇರುವೈಲು ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರು ಸ್ವಾಗತಿಸಿದರು. ಕೋಶಾಧಿಕಾರಿ ಅರವಿಂದ ವೈ.ಆಚಾರ್ಯ ಬೆಳುವಾಯಿ ವಂದಿಸಿದರು. ಗಂಗಾಧರ ಆಚಾರ್ಯ ಕೊಂಡವೂರು ಕಾರ್ಯಕ್ರಮ ನಿರೂಪಿಸಿದರು.
ಬ್ರಾಹ್ಮೀ ಮುಹೂರ್ತದಲ್ಲಿ ಪೀಠವಾತೆ ಶ್ರೀ ಮಹಾಸರಸ್ವತಿ ದೇವಿ ಮೂರ್ತಿಯು ಸಕಲ ವೈಭವಗಳೊಂದಿಗೆ ಶ್ರೀ ಸರಸ್ವತೀ ಯಾಗ ಶಾಲೆಯಲ್ಲಿ ವಿಶೇಷವಾಗಿ ನಿರ್ಮಿಸಲಾದ ಶ್ರೀಸರಸ್ವತೀ ಮಂಟಪಕ್ಕೆ ಆಗಮಿಸುವುದರೊಂದಿಗೆ ರಾಶಿ ಪೂಜೆ ಆರಂಭಗೊಂಡಿತು. ಬೆಳಗ್ಗೆ 5.06ರ ಸಿಂಹ ಲಗ್ನದಲ್ಲಿ ಪ್ರಾರಂಭಗೊಂಡ ದ್ವಾದಶ ರಾಶಿ ಪೂಜೆ ಶನಿವಾರ ಬೆಳಗ್ಗೆ 5.02ಕ್ಕೆ ಕರ್ಕಾಟಕ ರಾಶಿಯಲ್ಲಿ ಪೀಠವಾತೆ ಶ್ರೀ ಮಹಾಸರಸ್ವತಿ ದೇವಿಗೆ ವಿಶೇಷ ರಾಜೋಪಚಾರ ಮಹಾಪೂಜೆ, ಬಲಿ ಉತ್ಸವ, ಅವಭೃತದೊಂದಿಗೆ ಸಂಪನ್ನಗೊಳ್ಳುವುದು. ನಿಗದಿತ ರಾಶಿ ಸಮಯದಲ್ಲಿ 12 ರಾಶಿಗನುಗುಣವಾದ ಬಣ್ಣದ ರಾಶಿ ಮಂಟಪಗಳಲ್ಲಿ ಶ್ರೀ ಮಹಾಸರಸ್ವತೀ ದೇವಿಗೆ ನೈವೇಧ್ಯ, ಭಜನಾ ಸಂಕೀರ್ತನೆ, ಅಷ್ಟಾವಧಾನಸೇವೆ ಸಮರ್ಪಣೆೆಯಾಯಿತು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಪೂಜೆ ವೇಳೆ ಆಸ್ಥಾನ ವಿದ್ವಾಂಸರಾದ ಪಂಜ ಭಾಸ್ಕರ ಭಟ್, ಉಮೇಶ್ ಆಚಾರ್ಯ ಪಡೀಲು, ವೈದಿಕ ವಿದ್ವಾಂಸರಾದ ಹಿರಣ್ಯ ವೆಂಕಟೇಶ್ವರ ಭಟ್, ಶ್ರೀಧರ ಶರ್ಮ ಕಟಪಾಡಿ, ಲಕ್ಷ್ಮೀಕಾಂತ ಶರ್ಮ ಬಾರ್ಕೂರು ಮತ್ತಿತರರು ಉಪಸ್ಥಿತರಿದ್ದರು.
ರಾಶಿ ಪೂಜೆ ಕ್ಷೇತ್ರದ ಪ್ರಸಿದ್ಧಿ ಹೆಚ್ಚಿಸಿದೆ. ಸಂಸ್ಥಾನದಲ್ಲಿನ ಮುಂದಿನ ಅಭಿವೃದ್ಧಿ ಕಾರ್ಯಗಳಿಗೂ ಪೂರ್ಣ ಸಹಕಾರದ ನಿರೀಕ್ಷೆಯಲ್ಲಿದ್ದೇವೆ. ಕೆರೆ ನಿರ್ಮಿಸಿ, ಅದರ ಮಧ್ಯದಲ್ಲಿ ದೇವಸ್ಥಾನ ನಿರ್ವಾಣದ ಕನಸು ಹೊಂದಲಾಗಿದೆ. ವಿ.ಶ್ರೀಧರ ಆಚಾರ್ಯ ವಡೇರಹೋಬಳಿ ಆನೆಗುಂದಿ ಪ್ರತಿಷ್ಠಾನ ಅಧ್ಯಕ್ಷ