

ಹುಬ್ಬಳ್ಳಿ: ಭಾರತೀಯ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ಅನುಮೋದಿಸಿದ ನಿಧಿ ಪ್ರಯಾಸ ಸಂಸ್ಥೆ ವತಿಯಿಂದ ಪ್ರಯಾಸಿಗಳಿಗೆ ಅನುದಾನ ನೀಡುವ ಮತ್ತು ಸಂಸ್ಥೆಗೆ ಸೇರಿಸಿಕೊಳ್ಳವ ಕಾರ್ಯಕ್ರಮನ್ನು ಗೋಕುಲ ರಸ್ತೆಯ ದೇಶಪಾಂಡೆ ಸ್ಟಾರ್ಟ್ ಅಪ್ನಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು.
ದೇಶಪಾಂಡೆ ಫೌಂಡೇಷನ್ ಸಿಇಒ ವಿವೇಕ ಪವಾರ ಮಾತನಾಡಿ, ಆವಿಷ್ಕಾರಗಳು ನವೋದ್ಯಮದ ಮೂಲಕ ಆರ್ಥಿಕತೆ ಉತ್ತೇಜಿಸಬಹುದು. ವಸ್ತುಗಳನ್ನು ಮಾರುಕಟ್ಟೆಗೆ ಬಿಡುವ ಮೊದಲು ತಮ್ಮ ಉದ್ಯಮದ ಸ್ಪಷ್ಟತೆಯನ್ನು ಹೊಂದಿರಬೇಕು. ಉತ್ತಮ ಮಾರ್ಗದರ್ಶಕರಿಂದ ಉದ್ಯಮದ ಸ್ಪಷ್ಟ ಚಿತ್ರಣ ದೊರೆಯುತ್ತದೆ. ಉದ್ಯಮ ಜೀವನ ಕಠಿಣವೆನಿಸಿದರೂ ನಿಮಗೆ ಅನುಭವದ ಮುಖಾಂತರ ಯಶಸ್ಸು ದೊರಕಿಸಿಕೊಡುತ್ತದೆ ಎಂದರು.
ಮುಂಬೈನ ಎಸ್ಐಎನ್ಇ ಐಐಟಿ ಪ್ರಾಜೆಕ್ಟ್ ಮ್ಯಾನೇಜರ್ ಕನನ್ ದೆಬರ್ ಮಾತನಾಡಿ, ನಿಧಿ ಪ್ರಯಾಸ ಅನುದಾನ ಶುರುವಾಗಿದ್ದರ ಕುರಿತು ವಿವರಿಸಿದರು.
ದೇಶಪಾಂಡೆ ಸ್ಟಾರ್ಟ್ಅಪ್ ಸಿಇಒ ರಾಜೀವ ಪ್ರಕಾಶ ಪ್ರಯಾಸಿಗಳನ್ನು ಅಭಿನಂದಿಸಿ, ದೇಶಪಾಂಡೆ ಸ್ಟಾರ್ಟ್ಅಪ್ ಹಾಗೂ ನಿಧಿ ಪ್ರಯಾಸ್ನ ಸೇವೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ದೇಶಪಾಂಡೆ ಸ್ಟಾರ್ಟ್ ಅಪ್ ಮಾರ್ಗದರ್ಶಕ ವಿವೇಕ್ ಪುಣೇಕರ, ನಿರ್ದೇಶಕ ಬಿ. ಗೋಪಾಲ್ ಕೃಷ್ಣನ್, ನಿಧಿ ಪ್ರಯಾಸ್ ಪ್ರೋಗ್ರಾಂ ಮ್ಯಾನೇಜರ್ ಅಮೃತ ಪಾಟೀಲ್ ಇತರರು ಇದ್ದರು.
20 ರಾಜ್ಯಗಳಿಂದ 408 ಅರ್ಜಿ ಸ್ವೀಕಾರ
ಕಾರ್ಯಕ್ರಮಕ್ಕೆ ನವ ಕ್ರಿಯಾಶೀಲ ಉದ್ಯಮಿಗಳನ್ನು ಆಹ್ವಾನಿಸಲಾಗಿತ್ತು. ಅಗ್ರಿ-ಟೆಕ್ (ಕೃಷಿ ತಾಂತ್ರಿಕತೆ), ಮೆಡಿ-ಟೆಕ್(ವೈದ್ಯಕೀಯ ತಾಂತ್ರಿಕತೆ ), ಶೈಕ್ಷಣಿಕ ತಾಂತ್ರಿಕತೆ (ಎಜು ಟೆಕ್) ಹಾಗೂ ನ್ಯಾನೋ ಮೆಟ್ರೋ ಕ್ಷೇತ್ರದವರು ಭಾಗವಹಿಸಿದ್ದರು. ವಿದ್ಯಾರ್ಥಿಗಳು, ನವ ಉದ್ಯಮಿಗಳು, ಶೈಕ್ಷಣಿಕ ಕ್ಷೇತ್ರದ ವ್ಯಕ್ತಿಗಳು ಹಾಗೂ ಅನೇಕರು ಅರ್ಜಿ ಸಲ್ಲಿಸಿದ್ದರು. ಅಂದಾಜು 20 ರಾಜ್ಯಗಳಿಂದ 408 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಹೂಡಿಕೆದಾರರಿಗೆ ತಮ್ಮ ಆವಿಷ್ಕಾರಗಳನ್ನು ಪ್ರಸ್ತುತಪಡಿಸಲು 18 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. 18 ಅಭ್ಯರ್ಥಿಗಳಲ್ಲಿ 7 ಜನ ಅನುದಾನಕ್ಕೆ ಆಯ್ಕೆಯಾಗಿದ್ದಾರೆ.
ಅನುದಾನ ಪಡೆದ ಏಳು ನಿಧಿ ಪ್ರಯಾಸಿಗಳು:
ಜೈಪುರದ ಅಲ್ಪಾಲ್ಯೂಸ್ ಟೆಕ್ನಾಲಜಿ ಪ್ರೖೆ.ಲಿ.-ಸಂದಲ್ ಕೋಟವಾಲಾ(ಮೆಡ್ಟೆಕ್)
ಬೆಂಗಳೂರಿನ ಸ್ಪಾಕೋಲೈಫ್ ಟೆಕ್ನಾಲಜೀಸ್-ಪೂಜಾ ಹೆಮ್ಮಿಗೆ(ಮೆಡ್ಟೆಕ್)
ಬೆಂಗಳೂರಿನ ಮೈಮಿಕ್ ಮೆಡಿಕಲ್ ಸಿಮ್ಯುಲೇಷನ್ಸ್ ಪ್ರೖೆ.ಲಿ.-ಶಾಂಥನು ಚಕ್ರವರ್ತಿ-ಮೆಡ್ಟೆಕ್
ಮುಂಬೈನ ಫಿಟ್ಪೂಲ್-ದೀಪಕ್ ಮಾಲನಿ-ಮೆಡ್ಟೆಕ್
ಮಂಗಳೂರಿನ ಸೆರೆಬ್ರಾ ಸೈನ್ಸ್ ಪ್ರೖೆ.ಲಿ.-ನೀರಜ್ ಭಂಡಾರಿ-ಮೆಡ್ಟೆಕ್
ಹುಬ್ಬಳ್ಳಿಯ ರಪ್ತುರೆ ಇನ್ನೋವೇಷನ್ ಲ್ಯಾಬ್ಸ್ ಪ್ರೖೆ.ಲಿ.-ನವಜೀತ್ ಕರ್ಕೆರ
ಬೆಂಗಳೂರಿನ ಕೋಶಾ ಡಿಸೈನ್ಸ್-ವಿಜಯಕುಮಾರ ಕೆ.-ನಾನ್ವೆುಟ್ರೋ ಸೆಗ್ಮೆಂಟ್