ಹಿಪ್ಪುನೇರಳೆ ನಾಟಿ ನರ್ಸರಿಗೆ ಸಹಾಯಧನ: ರೈತರು ರೇಷ್ಮೆ ಇಲಾಖೆಯನ್ನು ಸಂಪರ್ಕಿಸಿ

Reshme krishi in byadgi
Published on

ಮಂಡ್ಯ: ಪ್ರಸಕ್ತ ಸಾಲಿನ ಜಿಲ್ಲಾ/ತಾಲೂಕು ಪಂಚಾಯಿತಿ ಕಾರ್ಯಕ್ರಮದಡಿಯಲ್ಲಿ ವಿವಿಧ ಸೌಲಭ್ಯ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ.

ಹೊಸದಾಗಿ ಹಿಪ್ಪು ನೇರಳೆ ನಾಟಿ ನರ್ಸರಿಗೆ ಸಹಾಯಧನ ಮತ್ತು ಸಿ.ಎಸ್.ಆರ್ ರೇಷ್ಮೆ ಬೆಳೆಗಾರರು ಸಾಕುವ ರೇಷ್ಮೆ ಹುಳುಗಳಿಗೆ ತಗಲುವ ಸೋಂಕು ರೋಗವನ್ನು ತಡೆಗಟ್ಟಲು ಬೇಕಾದ ಸೋಂಕು ನಿವಾರಕವನ್ನು ಉಚಿತವಾಗಿ ಪಡೆಯಲು ಜೂನ್ ಅಂತ್ಯದೊಳಗೆ ಆಯಾ ತಾಲೂಕಿನ ತಾಂತ್ರಿಕ ಸೇವಾ ಕೇಂದ್ರಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net