ತಾಳೆ ಬೆಳೆಯಲು ಸಹಾಯಧನ: ಆಸಕ್ತ ರೈತರು ಕೃಷಿ ಇಲಾಖೆಯನ್ನು ಸಂಪರ್ಕಿಸಿ

Farmer Subsidy
Published on

ಮಂಡ್ಯ: ಜಿಲ್ಲೆಯಲ್ಲಿ ತಾಳೆ ಬೆಳೆಯಲು ಆಸಕ್ತಿ ಹೊಂದಿರುವ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಖಾದ್ಯ ತೈಲದ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ತಾಳೆ ಬೆಳೆ ಬೇಸಾಯ ಪ್ರಮುಖ ಪಾತ್ರ ವಹಿಸಲಿದೆ. ಇತರೆ ಸಾಂಪ್ರದಾಯಿಕ ಎಣ್ಣೆ ಕಾಳುಗಳಿಗೆ ಹೋಲಿಸಿದ್ದಲ್ಲಿ ಪ್ರತಿ ಹೆಕ್ಟೇರಿಗೆ ಅತ್ಯಧಿಕ 4 ರಿಂದ 5 ಟನ್ ಖಾದ್ಯ ತೈಲ ಪಡೆಯಬಹುದು. ಖಾದ್ಯ ತೈಲ ಉತ್ಪಾದನೆಯನ್ನು ಹೆಚ್ಚಿಸುವ ಹಾಗೂ ಆಮದನ್ನು ಕಡಿಮೆ ಮಾಡುವ ಉದ್ದೇಶದಿಂದ ತಾಳೆ ಬೆಳೆ ಬೇಸಾಯವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರೋತ್ಸಾಹಿಸಲಾಗುತ್ತಿದೆ. ಸರ್ಕಾರದ ನಿಗದಿತ ದರ ಹಾಗೂ ರೈತರಿಂದ ನಿಯಮಿತವಾಗಿ ಖರೀದಿಸುವ ಮಾರುಕಟ್ಟೆ ಇರುತ್ತದೆ.

ತಾಳೆ ಬೆಳೆ ಬೇಸಾಯಕ್ಕೆ ಹೊಸ ಪ್ರದೇಶ ವಿಸ್ತರಣೆ, 1, 2, 3 ಮತ್ತು 4ನೇ ವಷರ್ದ ನಿರ್ವಹಣೆ, ಅಂತರ ಬೇಸಾಯ, ಹನಿ ನೀರಾವರಿ, ಎತ್ತರದ ಮರಗಳಿಂದ ತಾಳೆಹಣ್ಣು ಕಟಾವು, ಡೀಸೆಲ್ ಪಂಪ್‌ಸೆಟ್, ಯಾಂತ್ರೀಕರಣಕ್ಕೆ ತೋಟಗಾರಿಕೆ ಇಲಾಖೆ ವತಿಯಿಂದ ಸಹಾಯಧನ ನೀಡಲಾಗುತ್ತದೆ. ಮಾಹಿತಿಗೆ ಹೋಬಳಿ ಮಟ್ಟದ ಸಹಾಯಕ ತೋಟಗಾರಿಕೆ ಅಧಿಕಾರಿಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net