ಜೇನು ಸಾಕಾಣಿಕೆಗೆ ಸಹಾಯಧನ: ಫಲಾನುಭವಿಗಳಿಗೆ ಸಿಗಲಿದೆ ಹಲವು ಸೌಲಭ್ಯ

Honey Bee
Published on

ಮಂಡ್ಯ: ಮಧುವನ ಜೇನು ಸಾಕಾಣಿಕೆ ಯೋಜನೆಯಡಿ 2023-24ನೇ ಸಾಲಿನ ರಾಜ್ಯ ವಲಯ ಹಾಗೂ ಜಿಲ್ಲಾ ವಲಯ ಜೇನು ಸಾಕಾಣಿ ಯೋಜನೆಯಡಿ ಜೇನು ಪೆಟ್ಟಿಗೆ, ಜೇನುಕುಟುಂಬ ಹಾಗೂ ಸ್ಟ್ಯಾಂಡ್ ಗಳನ್ನು ಖರೀದಿಸಿದ ಸಾಮಾನ್ಯ/ಇತರೆ ವರ್ಗದ ರೈತರಿಗೆ ಶೇ.75ರಷ್ಟು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರಿಗೆ ಶೇ.90ರಷ್ಟು ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿದೇರ್ಶಕರು(ಜಿ.ಪಂ), ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಿ ಸಹಾಯಧನ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net