ಬಿಲ್ಲವ ಸೇವಾ ಸಂಘದಿಂದ ಸಹಾಯಧನ ವಿತರಣೆ

New Project (22)
Published on

ಕಾಸರಗೋಡು: ಪೆರ್ಲದ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ದತ್ತಿನಿಧಿ ಕಾರ್ಯಕ್ರಮದ ಅಂಗವಾಗಿ ಮುಂಡಿತಡ್ಕ ಪ್ರಾದೇಶಿಕ ಸಮಿತಿ ಸಂಗ್ರಹಿಸಿದ ಮೊತ್ತವನ್ನು ಇತ್ತೀಚೆಗೆ ನಿಧನರಾದ ಸಂಘದ ಸದಸ್ಯ, ಬಜಕೂಡ್ಲು ನಡುಬೈಲು ದಿ.ಪುರುಷೋತ್ತಮ ಪೂಜಾರಿ ಅವರ ಪುತ್ರಿಯರ ಶಿಕ್ಷಣಕ್ಕಾಗಿ ಪತ್ನಿ ಚಂದ್ರಾವತಿ ಅವರಿಗೆ ಹಸ್ತಾಂತರಿಸಲಾಯಿತು.

ಮುಂಡಿತ್ತಡ್ಕ ಪ್ರಾದೇಶಿಕ ಸಮಿತಿ ಅಧ್ಯಕ್ಷ ಪೂವಪ್ಪ ಪೂಜಾರಿ ಧನಸಹಾಯ ಹಸ್ತಾಂತರಿಸಿದರು. ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಬಿ.ಪಿ.ಶೇಣಿ, ಕೇಂದ್ರ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯ ರಾಮ್ ಕುಮಾರ್, ಮುಂಡಿತಡ್ಕ ಸಮಿತಿ ಕಾರ್ಯದರ್ಶಿ ಉಮಲತಾ ಮುಗು, ಕೋಶಾಧಿಕಾರಿ ಲೋಹಿತ್ ಮುಗು, ಬೆದ್ರಂಪಳ್ಳ ಪ್ರಾದೇಶಿಕ ಸಮಿತಿ ಅಧ್ಯಕ್ಷ ಕೃಷ್ಣಪ್ಪ ನಡುಬೈಲು, ವಿನಯ ಕುಕ್ಕಿಲ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net