ಸುಬ್ರಾಯ ಶರ್ಮಾರ 186ನೇ ಸಂಖ್ಯೆಗಳ ಮಹಿಮೆ ಗ್ರಂಥ ಬಿಡುಗಡೆ

subraya
Published on

ಬೆಂಗಳೂರು : ಸಾಕಮ್ಮ ಗಾರ್ಡನ್​ನಲ್ಲಿರುವ ವೇದಾಂತ ನಿಲಯದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ವಿದ್ವಾನ್ ಡಾ.ಕೆ.ಜಿ. ಸುಬ್ರಾಯ ಶರ್ಮಾರ 186 ನೇ ಕನ್ನಡ ಗ್ರಂಥ ‘ಸಂಖ್ಯೆಗಳ ಮಹಿಮೆ’ ಲೋಕಾರ್ಪಣೆಗೊಂಡಿತು.

ಪ್ರೊ.ಬಿ.ಆರ್.ಪ್ರಕಾಶ್ ಗ್ರಂಥ ಬಿಡುಗಡೆ ಮಾಡಿದರು. ಪ್ರೊ.ಕೆ.ಎಸ್.ರಾಜಗೋಪಾಲನ್ ಗ್ರಂಥ ಪರಿಚಯ ಮಾಡಿಕೊಟ್ಟರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ಬಿ.ಆರ್ ಕೃಷ್ಣ , ಪ್ರೊ.ಸಿ.ವಿ.ಪುರುಷೋತ್ತಮ ಪಾಲ್ಗೊಂಡಿದ್ದರು. ಸುಬ್ರಾಯ ಶರ್ಮಾ ದಂಪತಿಗಳು ಉಪಸ್ಥಿತರಿದ್ದರು.

ಸುಬ್ರಾಯ ಶರ್ಮರ ವಿದ್ಯಾಗುರುಗಳಾದ ಹೊಳೆನರಸೀಪುರದ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು ವೇದಾಂತ ಪಾಠ ಮಾಡುವಾಗ ತಿಳಿಸಿಕೊಟ್ಟಿದ್ದ ಸಂಖ್ಯೆಗಳ ವಿಶೇಷವನ್ನು ಪುಸ್ತಕ ರೂಪದಲ್ಲಿ ಓದುಗರಿಗೆ ಅರ್ಥವಾಗುವಂತೆ ನಿರೂಪಿಸಿ ಕೊಟ್ಟಿದ್ದು,ಕಲ್ಪಗಳು, ಸಂವತ್ಸರಗಳು, ಮನ್ವಂತರ , ಯುಗ, ದ್ವೀಪ, ಶಕ, ಅವತಾರ ಮತ್ತಿತರ ಕುತೂಹಲದ ಅಂಶಗಳ ಕುರಿತು ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net