ಯೋಗಾಸನ ಸ್ಪರ್ಧೆಯಲ್ಲಿ ಶಿಕ್ಷಕ ಸುಬ್ರಾಯ ಭಟ್ಟಗೆ ಚಿನ್ನ

29 ylp subray bhat
Published on

ಯಲ್ಲಾಪುರ: ಪಟ್ಟಣದ ರವೀಂದ್ರನಗರದ ಓಂಕಾರ ಯೋಗ ಕೇಂದ್ರದ ಯೋಗ ಶಿಕ್ಷಕ ಸುಬ್ರಾಯ ಭಟ್ಟ ಆನೆಜಡ್ಡಿ ಅವರು ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿ ಸಾಧನೆ ಮಾಡಿದ್ದಾರೆ.

ಯೋಗ ಫೆಡರೇಶನ್ ಆಫ್ ಇಂಡಿಯಾದಿಂದ ಚಿಕ್ಕಮಗಳೂರಿನ ಕಡೂರಿನಲ್ಲಿ ಆಯೋಜಿಸಿದ್ದ 49ನೇ ರಾಜ್ಯ ಯೋಗಾಸನ ಚಾಂಪಿಯನ್​ಶಿಪ್​ನಲ್ಲಿ 50-60 ವರ್ಷದವರ ವಿಭಾಗದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ್ದಾರೆ.

ಸುಬ್ರಾಯ ಭಟ್ಟ ಅವರು ಈ ಹಿಂದೆಯೂ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ಇವರು, ಕಳೆದ 14 ವರ್ಷಗಳಿಂದ ಯೋಗ ತರಬೇತಿ ನೀಡುತ್ತಿದ್ದಾರೆ. ಪತಂಜಲಿ ಯೋಗ ಸಮಿತಿಯ ಜಿಲ್ಲಾ ಯೋಗ ವಿಸ್ತಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net