

ಮಂಗಳೂರು : ಸುಬ್ರಹ್ಮಣ್ಯದ ಕುಮಾರಧಾರ ಸ್ನಾನ ಘಟ್ಟದಲ್ಲಿ ಆ.21ರಂದು ನೀರಲ್ಲಿ ಮುಳುಗಿದ ಮಂಡ್ಯದ ಯುವಕ ಸ್ವಾಮಿ ಅವರು ಇನ್ನೂ ಪತ್ತೆಯಾಗಿಲ್ಲ.
ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಶಂಕೆಯಿದ್ದು, ಮೂರು ದಿನಗಳ ಕಾಲ ಹುಡುಕಾಟ ಮಾಡಲಾಗಿದೆ. ಇಂದಿಗೆ ನಾಲ್ಕನೇ ದಿನ. ಬಿದ್ದಲ್ಲಿಂದ 6 ಕಿ.ಮೀ ದೂರ ಹುಡುಕಲಾಗಿದೆಯಾದರೂ ಯಾವುದೇ ಫಲಿತಾಂಶ ದೊರಕಲಿಲ್ಲ.
ಕಾಣೆಯಾದ ಯುವಕನ ಪೋಷಕರು, ಸಂಬಂಧಿಕರು ಸುಬ್ರಹ್ಮಣ್ಯದಲ್ಲೇ ಹತಾಶೆಯಿಂದ ಕಾಯುತ್ತಿದ್ದು ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇದರ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳದಿರುವ ಬಗ್ಗೆ ಅಕ್ರೋಶ ವ್ಯಕ್ತಪಡಿಸಿದ್ದಾರೆ.