ಸುಬ್ರಹ್ಮಣ್ಯ ಹವ್ಯಕ ಘಟಕದಿಂದ ಗೋಪೂಜೆ

SUB-NOV-25-10
Published on

ಸುಬ್ರಹ್ಮಣ್ಯ: ಗುತ್ತಿಗಾರು ವಲಯ ಹವ್ಯಕ ಪರಿಷತ್‌ನ ವತಿಯಿಂದ ವಲಯದ ಸರಣಿ ಗೋಪೂಜೆ ಅಂಗವಾಗಿ ತುಳಸಿ ಪೂಜೆ ಮತ್ತು ಶುಕ್ರವಾರ ಹವ್ಯಕ ಪರಿಷತ್‌ನ ಸುಬ್ರಹ್ಮಣ್ಯದ ಎರಡು ಘಟಕಗಳ ಆಶ್ರಯದಲ್ಲಿ ಗೋಪೂಜೆ ನೆರವೇರಿತು.


ಸುಬ್ರಹ್ಮಣ್ಯದ ನೂಚಿಲ ಶಿವರಾಮ ಭಟ್ಟರ ಮನೆಯಲ್ಲಿ ಗೋವುಗಳಿಗೆ ಪೂಜೆ ಸಮರ್ಪಿಸಲಾಯಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನಿವೃತ್ತ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್ ಕೆ. ಪೂಜೆ ನೆರವೇರಿಸಿದರು. ಗುತ್ತಿಗಾರು ವಲಯದ ಸಂಘಟನಾ ಪ್ರಧಾನ ಮುರಳಿಕೃಷ್ಣ ವಳಲಂಬೆ, ಗುತ್ತಿಗಾರು ವಲಯ ಹವ್ಯಕ ಪರಿಷತ್ ಅಧ್ಯಕ್ಷ ಶ್ರೀಕೃಷ್ಣ ಶರ್ಮ ಪಿ., ಪುರೋಹಿತರಾದ ಶಂಕರನಾರಾಯಣ ಶಾಸ್ತ್ರಿ, ನಂದಕಿಶೋರ ಭಟ್, ಪ್ರಸನ್ನ ಭಟ್, ಯುವ ಪ್ರಧಾನರಾದ ರಮೇಶ್ ಭಟ್ ನೂಚಿಲ, ಪ್ರಮುಖರಾದ ಶಿವರಾಮ ಭಟ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net