ಹುಣಸೂರು: ವ್ಯಾಪಕ ಮಳೆಯಿಂದಾಗಿ ಎ್ಸಿವಿ ತಂಬಾಕು ಬೆಳೆ ಹಾನಿಗೊಳಗಾಗಿದ್ದು, ಇದರ ಪ್ರಮಾಣವನ್ನು ತಂಬಾಕು ಮಂಡಳಿ ಅಂದಾಜು ಮಾಡಿ ಬೆಳೆಗಾರರಿಗೆ ಪರಿಹಾರ ದೊರಕಿಸಿಕೊಡಲು ಕೋರಿ ಕೃಷಿ ಇಲಾಖೆಗೆ ವರದಿ ನೀಡಲಾಗಿದೆ ಎಂದು ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಅಕಾರಿ(ಆರ್‌ಎಂಒ) ಬಿ.ಸುಬ್ಬರಾವ್ ತಿಳಿಸಿದ್ದಾರೆ.
ಮೈಸೂರು, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳ ಎಲ್ಲ ಪ್ರಮುಖ ಎಪ್‌ಸಿವಿ ತಂಬಾಕು ಬೆಳೆಯುವ ಪ್ರದೇಶಗಳಲ್ಲಿ ಮೇ ತಿಂಗಳ ಮೂರನೇ ವಾರದಿಂದ ಆರಂಭಗೊಂಡು ಜುಲೈ ತಿಂಗಳಿನಲ್ಲಿಯೂ ಮಳೆ ಮುಂದುವರಿದಿದ್ದು, ವಾಡಿಕೆಗಿಂತ ಹೆಚ್ಚಿನ ಮಳೆಯಾಗಿರುವ ಕಾರಣ ಎ್ಸಿವಿ ತಂಬಾಕು ಬೆಳೆಗೆ ಹಾನಿಯಾಗಿದೆ. ನಿರಂತರ ಮಳೆಯಿಂದಾಗಿ ವ್ಯಾಪಕವಾಗಿ ಹಾನಿಗೊಳಗಾದ ಪ್ರದೇಶಗಳಿಗೆ ತಂಬಾಕು ಮಂಡಳಿಯ ಕ್ಷೇತ್ರ ಸಿಬ್ಬಂದಿ ಭೇಟಿ ನೀಡಿ ಆಗಿರುವ ಹಾನಿಯ ಪ್ರಮಾಣವನ್ನು ಅಂದಾಜು ಮಾಡಿ ಬೆಳೆ ಹಾನಿಗೊಳಗಾದ ಬೆಳೆಗಾರರ ವಿವರವನ್ನು ಒಳಗೊಂಡು ಸಂಪೂರ್ಣ ಮಾಹಿತಿಯನ್ನು ಸಹಾಯಕ ಕೃಷಿ ನಿರ್ದೇಶಕರು ಮತ್ತು ಜಂಟಿ ಕೃಷಿ ನಿರ್ದೇಶಕರಿಗೆ ಸಲ್ಲಿಸಲಾಗಿದೆ. ಅಲ್ಲದೆ ತಂಬಾಕು ಬೆಳೆ ಹಾನಿಯನ್ನು ಇತರ ಬೆಳೆಗಳೊಂದಿಗೆ ಸಮೀಕ್ಷೆ ಕೈಗೊಂಡು ತಂಬಾಕು ಬೆಳೆಗಾರರಿಗೆ ಪರಿಹಾರವನ್ನು ಬಿಡುಗಡೆ ಮಾಡಿಕೊಡಲು ಕೋರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೀರು ಸೋರುವಂತೆ ಕ್ರಮವಹಿಸಿ: ನಿರಂತರ ಮಳೆಯ ನಡುವೆಯೇ ರೈತರು ತಂಬಾಕು ಎಲೆಗಳ ಕಟಾವು ಮಾಡಿದ್ದಾರೆ. ಅಲ್ಲದೆ ಹದ ಮಾಡುವ(ಕ್ಯೂರಿಂಗ್) ಪರಿಸ್ಥಿತಿಯೂ ಎದುರಾಗಿದೆ. ಆದರೆ ರೈತರು ಎಲೆಗಳ ಹದಗೊಳಿಸುವ ವೇಳೆ ಎಲೆಯ ಮೇಲಿನ ನೀರು ಸೋರಿ ಹೋಗುವಂತೆ ಮಾಡಿ ಸ್ವಲ್ಪ ತಡವಾಗಿ ಬ್ಯಾರನ್‌ಗೆ ಲೋಡ್ ಮಾಡಿ ನಂತರ ಹದಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದಲ್ಲಿ ಉತ್ತಮ ಗುಣಮಟ್ಟದಲ್ಲಿ ಹದಗೊಳಿಸುವ ಕಾರ್ಯ ಆಗಲಿದೆ. ರೈತರು ಈ ಕುರಿತು ಗಮನಿಸವಬೇಕೆಂದು ಕೋರಿದ್ದಾರೆ.
ವರದಿ ಪರಿಣಾಮ ಪರಿಹಾರಕ್ಕೆ ಶಿಾರಸು: ಈ ಬಾರಿ ಸತತ ಮಳೆಯಿಂದಾಗಿ ತಂಬಾಕು ಬೆಳೆ ಹಾನಿಗೊಳಗಾಗಿದೆ ಎನ್ನುವ ರೈತರ ಮಾತನ್ನು ಮಂಡಳಿ ಈವರೆಗೆ ಅಷ್ಟಾಗಿ ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಕುರಿತು ವಿಜಯವಾಣಿ ಪತ್ರಿಕೆಯಲ್ಲಿ ಜು.22ರಂದು ಲೌಡ್ ಸ್ಪೀಕರ್ ಕಾಲಂನಲ್ಲಿ ತಂಬಾಕು ಬೆಳೆ ಪರಿಸ್ಥಿತಿ ಕುರಿತು ಪರಿಣಾಮಕಾರಿ ವರದಿ ಪ್ರಕಟಗೊಂಡಿತ್ತು. ಇದರಿಂದ ವಿಷಯದ ಗಂಭೀರತೆ ಅರಿತ ಮಂಡಳಿ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಂಬಾಕು ಬೆಳೆಯನ್ನು ಕೇವಲ ಬೆಳೆಯನ್ನಾಗಿ ಪರಿಗಣಿಸಿ ಪರಿಹಾರ ನೀಡಲು ಕೋರಿ ಕೃಷಿ ಇಲಾಖೆಗೆ ಮಾಹಿತಿ ರವಾನಿಸಿದೆ ಎಂದು ಸುಬ್ಬರಾವ್ ತಿಳಿಸಿದ್ದಾರೆ.