

ವಿಜಯವಾಣಿ ಸುದ್ದಿಜಾಲ ಧಾರವಾಡ
ಆಹಾರ ಇಲಾಖೆಯ ಪಡಿತರ ಅಂಗಡಿ, ಹೋಟೆಲ್, ರಸ್ತೆ ಬದಿಯ ಆಹಾರ ಮಳಿಗೆ, ಅಂಗಡಿ, ಪೆಟ್ರೋಲ್ ಬಂಕ್, ಆಸ್ಪತ್ರೆಗಳಲ್ಲಿನ ಹೋಟೆಲ್‌ಗಳ ಕುರಿತು ದೂರುಗಳಿದ್ದರೆ ಸಾರ್ವಜನಿಕರು ಸಂಬ0ಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಬೇಕು. ಅಽಕಾರಿಗಳು ಸ್ಪಂದಿಸದಿದ್ದರೆ ಕರ್ನಾಟಕ ರಾಜ್ಯ ಆಹಾರ ಆಯೋಗಕ್ಕೆ ದೂರು ನೀಡಬೇಕು ಎಂದು ಆಯೋಗದ ಅದ್ಯಕ್ಷ ಡಾ. ಎಚ್. ಕೃಷ್ಣ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲೆಯಲ್ಲಿ ಆಹಾರ ಆಯೋಗ ನಡೆಸಿದ 4 ದಿನಗಳ ಪ್ರವಾಸದ ಕುರಿತು ಮಾಹಿತಿ ನೀಡಿದರು.
ಪ್ರತಿ ನ್ಯಾಯಬೆಲೆ ಅಂಗಡಿಗಳಲ್ಲಿ ಸಂಬ0ಧಪಟ್ಟ ಅಧಿಕಾರಿಗಳು, ಜಾಗೃತ ಸಮಿತಿಯ ಸದಸ್ಯರು, ಆಹಾರ ಆಯೋಗದ ಅಧ್ಯಕ್ಷರ ಹೆಸರು ಮತ್ತು ದೂರವಾಣಿ ಸಂಖ್ಯೆಗಳುಳ್ಳ ಫಲಕ ಹಾಕಬೇಕು. ಸರ್ಕಾರ ನಿಗದಿಪಡಿಸಿದಷ್ಟು ಪಡಿತರವನ್ನು ಉಚಿತವಾಗಿ ನೀಡದಿದ್ದರೆ ಸಂಬ0ಧಪಟ್ಟ ಅಽಕಾರಿಗಳಿಗೆ ತಿಳಿಸಬೇಕು. ಎಂದರು.
ಕರ್ನಾಟಕ ಆಹಾರ ನಿಗಮದ ಉಗ್ರಾಣಗಳು ಸುರಕ್ಷಿತವಾಗಿಲ್ಲ. ಸ್ವಚ್ಛತೆ, ತಾಂತ್ರಿಕತೆ ಕೊರತೆ ಇರುವುದು ಪ್ರವಾಸದ ವೇಳೆ ಕಂಡುಬ0ತು. ಅಧಿಕಾರಿಗಳು ಗಮನ ಹರಿಸಲು ಸೂಚಿಸಲಾಗಿದೆ. ಧಾರವಾಡ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ದಾಸ್ತಾನು, ಫಲಾನುಭವಿಗಳಿಗೆ ಸೌಲಭ್ಯ, ರೈತರ ಬೇಡಿಕೆಯ ಮಾಹಿತಿ ಇಟ್ಟಿರುವುದು ಕಂಡುಬ0ತು. ಜಿಲ್ಲಾ ಆಸ್ಪತ್ರೆಯಲ್ಲಿ ಇನ್ನೂ ಒಂದು ಎಕ್ಸ್ರೇ ಅವಶ್ಯಕತೆ ಹಾಗೂ ಉಳಿದ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ನೇಮಕಾತಿ ಆಗದಿರುವುದು ಗೊತ್ತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಜಿಲ್ಲಾಽಕಾರಿ ದಿವ್ಯ ಪ್ರಭು, ಪೊಲೀಸ್ ವರಿಷ್ಠಾಽಕಾರಿ ಡಾ. ಗೋಪಾಲ ಬ್ಯಾಕೋಡ, ಆಹಾರ ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಸುಮಂತ ರಾವ್, ಮಾರುತಿ ದೊಡ್ಡಲಿಂಗಣ್ಣವರ, ರೋಹಿಣಿ ಪ್ರಿಯ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ಇದ್ದರು.