ನಿರ್ದೇಶಕ ವಿರುದ್ಧ ಆರೋಪಕ್ಕೆ ಖಂಡನೆ

HUN-OCT-20-1(RAITHA SANGHA MEMORENDUM)
ರಾಜ್ಯ ವರ್ಜೀನಿಯ ತಂಬಾಕು ಬೆಳೆಗಾರರ ಸಂಘದ ಸದಸ್ಯರು ಹುಣಸೂರು ಉಪವಿಭಾಗದ ಡಿವೈಎಸ್‌ಪಿ ಗೋಪಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿದರು. ವಿಕ್ರಂಗೌಡ, ಹೊಸೂರು ಕುಮಾರ್, ಅಶೋಕ್, ನಾಗೇಗೌಡ, ಉಂಡುವಾಡಿ ಚಂದ್ರೇಗೌಡ ಇತರರಿದ್ದರು.
Published on

ಹುಣಸೂರು: ತಂಬಾಕು ಮಂಡಳಿ ನಿರ್ದೇಶಕ ಬಿ.ಶ್ರೀನಿವಾಸ್ ವಿರುದ್ಧ ಸುಳ್ಳು ಆರೋಪ ಹೊರಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ರಾಜ್ಯ ವರ್ಜೀನಿಯಾ ತಂಬಾಕು ಬೆಳೆಗಾರರ ಒಕ್ಕೂಟದ ಸದಸ್ಯರು ಡಿವೈಎಸ್‌ಪಿಗೆ ಮನವಿ ಸಲ್ಲಿಸಿದರು.

ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ನೇತೃತ್ವದಲ್ಲಿ ಸೋಮವಾರ ನಗರದ ಡಿವೈಎಸ್‌ಪಿ ಕಚೇರಿಗೆ ಒಕ್ಕೂಟದ ಸದಸ್ಯರು ತೆರಳಿ ಗೋಪಾಲಕೃಷ್ಣರಿ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಶೃಂಗಾರ ಎನ್ನುವವರು ತಾಲೂಕಿನ ಕಟ್ಟೆಮಳಲವಾಡಿ ಡಿ.ದೇವರಾಜ ಅರಸು ತಂಬಾಕು ಮಾರುಕಟ್ಟೆಗೆ ಕಾರ್ಮಿಕರನ್ನು ಪೂರೈಸುವ ಹೊರಗುತ್ತಿಗೆ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಕೆಲವು ಲೋಪದೋಷ ಮತ್ತು ಬೆಳೆಗಾರರಿಗೆ ಆಗುತ್ತಿದ್ದ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪಾರದರ್ಶಕವಾಗಿ ಕಾರ್ಮಿಕರ ಪೂರೈಕೆ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಆದರೆ ಈ ಸಾಲಿನಲ್ಲಿ ಸದರಿ ವ್ಯಕ್ತಿಯು ತಂಬಾಕು ಮಂಡಳಿಯ ನಿಬಂಧನೆಗಳ ಪ್ರಕಾರ ಕಾರ್ಮಿಕ ವ್ಯವಸ್ಥೆಯ ಹೊರಗುತ್ತಿಗೆ ಪಡೆಯಲು ವಿಫಲರಾಗಿದ್ದಾರೆ. ಇದರಿಂದ ಕುಪಿತಗೊಂಡು ಶೋಷಿತ ಸಮಾಜದವನೆಂದು ಕಾನೂನನ್ನು ದುರುಪಯೋಗಪಡಿಸಿಕೊಂಡು ರೈತಪರ ಕಾಳಜಿ ಹೊಂದಿರುವ, ಕೇಂದ್ರ ಸರ್ಕಾರದ ಉನ್ನತ ಅಧಿಕಾರಿ ಬಿ.ಶ್ರೀನಿವಾಸ್ ವಿರುದ್ಧ ಜಾತಿ ನಿಂದನೆಯ ದೂರು ನೀಡಿರುವುದು ಅಪರಾಧವಾಗಿದೆ. ಈ ಮೂಲಕ ಪ್ರಾಮಾಣಿಕ ಅಧಿಕಾರಿಯ ತೇಜೋವಧೆಗೆ ಯತ್ನಿಸಿದ್ದಾರೆ ಎಂದು ದೂರಿದರು.

ಈಗಾಗಲೇ ಮಂಡಳಿಯಲ್ಲಿ ರೈತರ ಹಣ ದುರುಪಯೋಗವಾಗಿರುವ ಬಗ್ಗೆ ಕ್ರಮವಹಿಸಿದ್ದು ಮತ್ತು ರೈತರಿಗೆ ತಂಬಾಕು ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ಶೋಷಣೆಗಳನ್ನು ಪರಿಹರಿಸಿ ದಕ್ಷ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುತ್ತಿಸುದ್ದಾರೆ. ಆದ್ದರಿಂದ ಅಧಿಕಾರಿಯ ವಿರುದ್ಧ ಸುಳ್ಳು ಮೊಕದ್ದಮ್ಮೆ ದಾಖಲಿಸಲು ಮುಂದಾಗಿರುವ ಶೃಂಗಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ತಂಬಾಕು ಮಂಡಳಿಯ ಸದಸ್ಯರಾದ ವಿಕ್ರಂಗೌಡ, ಎಚ್.ಡಿ.ಕೋಟೆಯ ಬಸವರಾಜಪ್ಪ, ಪಿರಿಯಾಪಟ್ಟಣ ಚೆಲುವಯ್ಯ, ಮಾಜಿ ಪ್ರಧಾನ ಕಾರ್ಯದರ್ಶಿ ನಾಗೇಗೌಡ , ಕಟ್ಟೆಮಲಳವಾಡಿ ಅಶೋಕ್, ಶ್ರೀಧರ್, ಮಹಾದೇವ, ರವಿ ನಾರಾಯಣ್, ಉಂಡವಾಡಿ ಚಂದ್ರೇಗೌಡ, ಮೋದೂರು ಶಿವಣ್ಣ, ನಿಲುವಾಗಿಲು ಪ್ರಭಾಕರ್ ಕಲ್ಲಹಳ್ಳಿ ಶಿವಣ್ಣ, ಜಯಣ್ಣ ಶಿವಬಸಪ್ಪ, ತಂಬಾಕು ಬೆಳೆಗಾರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net