ಸ್ಮಶಾನಕ್ಕಾಗಿ ಜಾಗ ನೀಡುವಂತೆ ಮನವಿ ಸಲ್ಲಿಕೆ

10 KRN-1
Published on

ಕೆ.ಆರ್.ನಗರ : ತಾಲೂಕಿನ ಗದ್ದೆಹೊಸಹಳ್ಳಿ ಗ್ರಾಮದಲ್ಲಿರುವ ಭೋವಿ ಸಮಾಜ ಮತ್ತು ಇತರೆ ದಲಿತರಿಗೆ ಸ್ಮಶಾನಕ್ಕೆಂದು (ರುದ್ರಭೂಮಿ) ಜಾಗ ಗುರುತಿಸಿಕೊಡುವಂತೆ ಶ್ರೀ ಮಾರಮ್ಮದೇವಿ ಭೋವಿ ಟ್ರಸ್ಟ್ ವತಿಯಿಂದ ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.


ಕೆ.ಆರ್.ನಗರ ತಾಲೂಕಿನ ವ್ಯಾಪ್ತಿಯ ಗದ್ದೆಹೊಸಹಳ್ಳಿ ಗ್ರಾಮದಲ್ಲಿ ಬಹಳ ಹಿಂದಿನಿಂದಲು ಭೋವಿ ಸಮಾಜ ಸೇರಿದಂತೆ ಇತರೆ ದಲಿತ ಸಮುದಾಯಗಳ 150ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ಇಲ್ಲಿಯವರೆಗೆ ಅವರಿಗೆ ಸ್ಮಶಾನ ಇಲ್ಲ. ಸಮುದಾಯದ ಮುಖಂಡರು 15 ವರ್ಷಗಳ ನಿರಂತರ ಹೋರಾಟದ ಫಲವಾಗಿ ಸ್ಮಶಾನಕ್ಕಾಗಿ ಜಾಗ ಗುರುತಿಸಿ ಸ್ಥಳ ಮಂಜೂರು ಮಾಡಿಕೊಡಲಾಯಿತು ಆದರೆ ಇದುವರೆವಿಗೂ ಸ್ಥಳದ ಅಭಿವೃದ್ಧಿ ಮಾಡಿಲ್ಲ.


ಇದರಿಂದಾಗಿ ಶವ ಸಂಸ್ಕಾರಕ್ಕೆ ಜನ ಪರದಾಡುವಂತಾಗಿದೆ. ಆದ್ದರಿಂದ ಶೀಘ್ರವಾಗಿ ಕ್ರಮಕೈಗೊಂಡು ದಲಿತ ಸಮುದಾಯಗಳಿಗೆ ಸ್ಮಶಾನಕ್ಕೆ ಹೊಸಹಳ್ಳಿ ಗ್ರಾಮದ ವ್ಯಾಪ್ತಿಗೆ ಸಂಬಂಧಪಟ್ಟಂತೆ ಹಾಗೂ ಅಕ್ಕಪಕ್ಕದಲ್ಲಿರುವ ಯಾವುದಾದರು ಒಂದು ಜಾಗವನ್ನು ಗುರುತಿಸುವ ಕೊಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಶ್ರೀ ಮಾರಮ್ಮದೇವಿ ಭೋವಿ ಟ್ರಸ್ಟ್ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ರಾಜಶೇಖರ್, ವ್ಯವಸ್ಥಾಪಕ ಕೆ.ಎಸ್.ನಾಗೇಶ್, ಮುಖಂಡರಾದ ಮುರುಗೇಶ್, ಎಸ್.ನಾರಾಯಣ್, ಮಂಜು, ಪುರುಷೋತ್ತಮ, ರಾಮಣ್ಣ. ಗಿರೀಶ್ ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net