ಬಡವರಿಗೆ ನಿವೇಶನ ನೀಡಲು ಮನವಿ ಸಲ್ಲಿಕೆ

15Kush01
Published on


ಕೊಡಗು : ಕುಶಾಲನಗರ ಭಾಗದಲ್ಲಿ ಇರುವ ಎಲ್ಲ ವರ್ಗದ ನಿವೇಶನ ರಹಿತರಿಗೆ ನಿವೇಶನ ನೀಡಬೇಕೆಂದು ದಲಿತ ಸಂಘರ್ಷ ಸಮಿತಿ (ಭೀಮವಾದ) ಕೊಡಗು ಜಿಲ್ಲಾಧ್ಯಕ್ಷ ಕೆ.ಬಿ.ರಾಜು ನೇತೃತ್ವದಲ್ಲಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.


ಸೋಮವಾರ ಕುಶಾಲನಗರ ತಹಸೀಲ್ದಾರ್ ಕಿರಣ್ ಗೌರಯ್ಯ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.


ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು, ಬುಡಕಟ್ಟು ಜನಾಂಗದವರು ಈಗಲೂ ಸ್ವಂತ ಜಾಗವಿಲ್ಲದೆ ತೊಂದರೆಯಲ್ಲಿ ಇದ್ದಾರೆ. ಅದರಿಂದ ಜಾತಿ, ಮತ ನೋಡದೆ ಭೂರಹಿತರಿಗೆ ನಿವೇಶನ ನೀಡಬೇಕೆಂದು ಕೆ.ಬಿ.ರಾಜು ಒತ್ತಾಯಿಸಿದರು.


ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡಲೇ ಈ ವಿಚಾರದಲ್ಲಿ ಕಾರ್ಯ ಪ್ರವೃತ್ತವಾಗಬೇಕು. ನಿವೇಶನ ಗುರುತಿಸಿ ಕೊಡುವುದರ ಜತೆಗೆ ಹಕ್ಕುಪತ್ರ ನೀಡಿ ದಾಖಲೆ ಸರಿಯಾಗುವಂತೆ ಮಾಡಬೇಕೆಂದು ಮನವಿ ಸಲ್ಲಿಸಿದರು.


ಭೂ ವಿರೋಧಿ ಐಕ್ಯ ಸಮಿತಿಯ ಎಸ್.ಕೆ.ಸ್ವಾಮಿ, ಆರ್‌ಪಿಐ ಪಕ್ಷದ ಆರ್.ಮಂಜುನಾಥ್, ಬಿ.ಆರ್.ರಾಜು, ದಸಂಸ ಪ್ರಕಾಶ್, ಅನೀತಾ, ಆದಿವಾಸಿ ಮುಖಂಡ ಜಯಪ್ರಕಾಶ್, ವೈ.ಪಿ.ಮೋಹನ್, ಮುತ್ತಣ್ಣ, ಭೋಜ, ಚೀಮಿ, ಮೋಹನ್, ಎನ್.ಕಾರ್ತಿಕ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net