61 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

Submission of nomination papers by 61 candidates
ಮುದ್ದೇಬಿಹಾಳ ಕರ್ನಾಟಕ ಕೋ ಆಪ್​ ಬ್ಯಾಂಕ್​ನಲ್ಲಿ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯಲ್ಲಿ ಚುನಾವಣಾ-ಧಿಕಾರಿ ವಿಜಯಕುಮಾರ ಉತ್ನಾಳ, ಸಹಾಯಕ ಚುನಾವಣಾ-ಧಿಕಾರಿ ಶಿವಾನಂದ ಕೂಡಗಿ, ಬ್ಯಾಂಕ್​ ಸಿಬ್ಬಂದಿ ಇದ್ದರು.
Published on

ಮುದ್ದೇಬಿಹಾಳ: ಪಟ್ಟಣದ ದಿ ಕರ್ನಾಟಕ ಕೋ&ಆಪರೇಟಿವ್​ ಬ್ಯಾಂಕ್​ ಆಡಳಿತ ಮಂಡಳಿ ನಿರ್ದೇಶಕರ 13 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ 61 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಗುರುವಾರ ಮುಕ್ತಾಯಗೊಂಡಿತು. ಸಾಮಾನ್ಯ 7 ಸ್ಥಾನಗಳಿಗೆ 35, ಮಹಿಳಾ 2 ಸ್ಥಾನಗಳಿಗೆ 8, ಹಿಂದುಳಿದ ವರ್ಗ (ಅ)ಒಂದು ಸ್ಥಾನಕ್ಕೆ 7, ಹಿಂದುಳಿದ ವರ್ಗ (ಬ) ಒಂದು ಸ್ಥಾನಕ್ಕೆ ಐವರು, ಪರಿಶಿಷ್ಟ ಜಾತಿ ಒಂದು ಸ್ಥಾನಕ್ಕೆ ನಾಲ್ವರು, ಪರಿಶಿಷ್ಟ ಪಂಗಡ ಒಂದು ಸ್ಥಾನಕ್ಕೆ ಇಬ್ಬರು ಸದಸ್ಯರು ನಾಮಪತ್ರ ಸಲ್ಲಿಸಿದ್ದಾರೆ.

ಡಿ.20ರಂದು ಬೆಳಗ್ಗೆ 11 ರಿಂದ ನಾಮಪತ್ರ ಪರಿಶೀಲನೆ ನಡೆದು ಸಂಜೆ ಕಣದಲ್ಲಿ ಉಳಿದವರ ಪಟ್ಟಿ ಪ್ರಕಟಗೊಳ್ಳಲಿದೆ. 21ರಂದು ಮಧ್ಯಾಹ್ನ 3ರವರೆಗೆೆ ನಾಮಪತ್ರ ಹಿಂತೆಗೆದುಕೊಳ್ಳಲು ಅವಕಾಶ ನೀಡಲಾಗಿದ್ದು, ನಂತರ ಉಮೇದುವಾರರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. 22ರಂದು ಮಧ್ಯಾಹ್ನ 3ರ ನಂತರ ಉಮೇದುವಾರರಿಗೆ ಚಿಹ್ನೆ ಹಂಚಿಕೆ, 23ರಂದು ಮಧ್ಯಾಹ್ನ 3ರ ನಂತರ ಚಿಹ್ನೆ ಸಮೇತ ಉಮೇದುವಾರರ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ. 29ರಂದು ಬೆಳಗ್ಗೆ 9 ರಿಂದ ಸಂಜೆ 4ರ ವರೆಗೆ ಪಟ್ಟಣದ ಹೇಮರಡ್ಡಿ ಮಲ್ಲಮ್ಮ ಪ್ರಾಥಮಿಕ ಶಾಲೆಯಲ್ಲಿ ಮತದಾನ ನಡೆದು ಸಂಜೆ ಮತ ಎಣಿಕೆ ನಡೆಯಲಿದೆ. ಅಂದೆ ಲಿತಾಂಶ ೂಷಿಸಲಾವುದು ಎಂದು ಚುನಾವಣಾಧಿಕಾರಿ ವಿಜಯಕುಮಾರ ಉತ್ನಾಳ ತಿಳಿಸಿದ್ದಾರೆ. ನಾಮಪತ್ರ ಸ್ವೀಕಾರ ಪ್ರಕ್ರಿಯೆಯಲ್ಲಿ ಸಹಾಯಕ ಚುನಾವಣಾಧಿಕಾರಿ ಶಿವಾನಂದ ಕೂಡಗಿ, ಬ್ಯಾಂಕ್​ ವ್ಯವಸ್ಥಾಪಕಿ ಸುಮಾ ನಾಡಗೌಡರ, ಸಿಬ್ಬಂದಿ ಸಂತೋಷ ರ್ಜಿಲಿ ಚುನಾವಣಾ ಪ್ರಕ್ರಿಯೆಗೆ ಸಹಕರಿಸಿದರು. ಬ್ಯಾಂಕ್​ ಪ್ರಧಾನ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿದರಕುಂದಿ ಚುನಾವಣಾ ಸಿಬ್ಬಂದಿಗೆ ಅಗತ್ಯ ನೆರವು ನೀಡಿ ಸಹಕರಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ಸತೀಶಕುಮಾರ ಓಸ್ವಾಲ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net