

ಬಸವಕಲ್ಯಾಣ: ಪ್ರಾಥಮಿಕ ಶಾಲಾ ಶಿಕ್ಷಕರನ್ನು ೧ ರಿಂದ ೭ನೇ ತರಗತಿಗೆ ನೇಮಕವಾದ ಶಿಕ್ಷಕರೆಂದು ಪರಿಗಣಿಸಬೇಕು. ೨೦೧೭ ನಂತರ ನೇಮಕವಾದ ಶಿಕ್ಷಕರಿಗೆ ಅನ್ವಯಿಸಬೇಕು. ಯಾವುದೇ ಕಾರಣಕ್ಕೂ ೨೦೧೬ಕ್ಕಿಂತ ಮೊದಲು ನೇಮಮಕವಾದವರಿಗೆ ಪೂರ್ವಾನ್ವಯಿಸಬಾರದು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯಿಸಿದೆ.
ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ೨೦೧೬ರ ಪೂರ್ವದಂತೆ ಅರ್ಹತೆಯ ಆಧಾರದ ಮೇಲೆ ಪ್ರೌಢ ಶಾಲೆಗೆ ಬಡ್ತಿ ನೀಡಬೇಕು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ೨೦೧೬ರ ಪೂರ್ವದಂತೆ ಮುಖ್ಯಗುರುಗಳ ಹಾಗೂ ಹಿರಿಯ ಮುಖ್ಯಗುರುಗಳ ಹುದ್ದೆಗೆ ಸೇವಾ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡುವ ಕುರಿತು ಕ್ರಮ ಕೈಗೊಳ್ಳಬೇಕು. ೨೦೧೭ರ ಮುಂಚಿತವಾಗಿ ೧ರಿಂದ ೭/೮ ತರಗತಿ ಬೋಧಿಸುವ ಶಿಕ್ಷಕರು ಎಂದು ನೇಮಕಾತಿ ಹೊಂದಿ ನಂತರ ಸೇವಾ ಹಿರಿತನ ಕಡೆಗಣಿಸಿ ೧ರಿಂದ ೫ ತರಗತಿ ಶಿಕ್ಷಕರೆಂದು ಹಿಂಬಡ್ತಿ ನೀಡಿರುವ ಅನ್ಯಾಯದ ವಿರುದ್ಧ ಬೃಹತ್ ಹೋರಾಟದ ಸೋಮವಾರ ನಗರದಲ್ಲಿ ಶಾಸಕರ ಕಾರ್ಯಾಲಯ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ತಹಸಿಲ್ ಕಚೇರಿಗೆ ತೆರಳಿ ಹೋರಾಟದ ಮಾಹಿತಿ ಹಾಗೂ ಚಳುವಳಿ ಪತ್ರ ಸಲ್ಲಿಸಲಾಯಿತು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಂತೋಷಕುಮಾರ್ ಅಕ್ಕಣ್ಣ, ಹುಲಸೂರು ತಾಲೂಕು ಅಧ್ಯಕ್ಷ ರಾಜಪ್ಪ ನಂದೋಡೆ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಹೆಂಬಾಡೆ, ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ್ ಮೇತ್ರೆ, ಭೀಮಶಂಕರ ಆದೆಪ್ಪ, ರಮೇಶ ಉಮ್ಮಾಪುರ, ಹರಿನಾಥ್ ಪಾಟೀಲ್, ವೀರೇಂದ್ರ ರೆಡ್ಡಿ. ಅಲ್ಲಾವುದ್ದೀನ್ ಪಟೇಲ್, ಮಹೇಶ್ ಮುಳೆ, ಶರಣಬಸಪ್ಪ ಬಿರಾದಾರ್, ಅಂಬಣ್ಣ ಘಾಂಗ್ರೆ, ಹಣಮಂತ ಬಾರಿಕರ್, ತುಕಾರಾಂ ರೊಡ್ಡೆ, ಉಲ್ಲಾಸ್ ಇಂದುಕಾಂದೆ, ರಾಜಮತಿ ಕೊರಳೆ, ಮೀನಾಕ್ಷಿ ಬಿರಾದಾರ್, ಚಂದ್ರಕಲಾ ಬಾಂಗೆ, ಅನ್ನಪೂರ್ಣ ಕಾಮಶೆಟ್ಟಿ, ಶಿವಪ್ಪ ಪಾಟೀಲ್, ಶಿವರಾಜ್ ಮಾಶೆಟ್ಟೆ, ಶಿವರಾಜ್ ಮಾರ್ಜಾಪುರ, ರೋಹಿದಾಸ್ ಮಾಲೆ, ದೇವೇಂದ್ರ ಪಟ್ನೆ, ಈಶ್ವರ ಎರನಳ್ಳೆ, ಶಕೀಲ್ ಪಟೇಲ್, ವಿಶ್ವನಾಥ್ ಕಾಂಬಳೆ, ಸಿದ್ದಣ್ಣ ಮಲಶೆಟ್ಟಿ, ಮಲ್ಲಪ್ಪ ಕೋಟೆ, ಕರಬಸಪ್ಪ ಬಿರಾದಾರ್, ಶ್ರೀನಿವಾಸ್ ರೆಡ್ಡಿ, ಮಹೇಶ್ ಗಂದಿಗೆ ಹಾಗೂ ವಿವಿಧ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.