31ನೇ ವಾರ್ಡಿಗೆ ಮೂಲ ಸೌಕರ್ಯ ಒದಗಿಸಿ

16-10-2024 KGL NEWS-3,,,
ಕೊಳ್ಳೇಗಾಲ ನಗರಸಭೆಯ 31ನೇ ವಾರ್ಡ್‌ಗೆ ಮೂಲ ಸೌಕರ್ಯ ಒದಗಿಸುವಂತೆ ನಿವಾಸಿಗಳು ಬುಧವಾರ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎ.ಪಿ.ಶಂಕರ್ ಅವರಿಗೆ ಮನವಿ ಸಲ್ಲಿಸಿದರು.
Published on

ಕೊಳ್ಳೇಗಾಲ: ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯ 31ನೇ ವಾರ್ಡಿಗೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಬುಧವಾರ ನಿವಾಸಿಗಳು ನಗರಸಭೆ ಅಧ್ಯಕ್ಷೆ ರೇಖಾ ಹಾಗೂ ಉಪಾಧ್ಯಕ್ಷೆ ಎ.ಪಿ.ಶಂಕರ್ ಅವರಿಗೆ ಮನವಿ ಸಲ್ಲಿಸಿದರು.

ನಗರಸಭೆ ಅಧ್ಯಕ್ಷರ ಕೊಠಡಿಗೆ ನಿವಾಸಿಗಳು ಭೇಟಿ ನೀಡಿ, 31ನೇ ವಾರ್ಡ್‌ನ ಸಹನಾ ಶಾಲೆಯ ಹಿಂಭಾಗದ ಬಡಾವಣೆಯಲ್ಲಿ ಬೀದಿ ದೀಪ, ರಸ್ತೆ ಹಾಗೂ ಚರಂಡಿ ಪರಿಪೂರ್ಣವಾಗಿಲ್ಲ. ಇದ್ದರಿಂದ ಮಳೆ ಬಂದಾಗ ರಸ್ತೆಯ ಮೇಲೆ ತಿರುಗಾಡಲು ಸಾಧ್ಯವಾಗದೆ ಪರದಾಡುವ ಪರಿಸ್ಥಿತಿಯಾಗಿದೆ.
ಆದ್ದರಿಂದಾಗಿ ನಗರಸಭೆ ಪೌರಾಯುಕ್ತರು ಹಾಗೂ ಅಧ್ಯಕ್ಷರು ಖುದ್ದು ಸ್ಥಳ ವೀಕ್ಷಣೆ ಮಾಡಬೇಕು. ಬೀದಿ ದೀಪ, ರಸ್ತೆ, ಚರಂಡಿ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಕೋರಿದರು.

ನಗರಸಭೆ ಸದಸ್ಯ ಮಂಜುನಾಥ್, ಸುರೇಶ್, ಮುಖಂಡ ಶಿವಮಲ್ಲು, ಬಸಂತ್, ಬಡಾವಣೆಯ ವಾಸಿಗಳಾದ ಬ್ರಹ್ಮಲಿಂಗಯ್ಯ, ಬಾಲಾಜಿ ಸಿಂಗ್, ಬಸವರಾಜು, ನಂಜುಂಡಸ್ವಾಮಿ, ಮಲ್ಲನಾಯಕ, ಎಸ್.ರಾಮೇಗೌಡ, ಚೇತನ್, ಮಲ್ಲಿಕಾರ್ಜುನ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net