ರಾಯಚೂರು: ಒಂದು ನಾಮಪತ್ರ ಸಲ್ಲಿಕೆ

12-04-Shiva-1
ರಾಯಚೂರು ಲೋಕಸಭೆ ಕ್ಷೇತ್ರದ ಉಮೇದುವಾರರಾಗಿ ಭಾರತೀಯ ಜನ ಸಾಮ್ರಾಟ್ ಪಕ್ಷದ ಶಾಮರಾಮ್ ಮೇದಾರ ಚುನಾವಣಾಧಿಕಾರಿ ಚಂದ್ರಶೇಖರ ನಾಯಕಗೆ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಅಪರ ಜಿಲ್ಲಾಕಾರಿ ಅಶೋಕ ದುಡಗುಂಟಿ, ಸೂಚಕರಾದ ಲಕ್ಷ್ಮಣ, ಹನುಮೇಶ ಇದ್ದರು.
Published on

ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆಯ ಮೊದಲ ದಿನವಾದ ಶುಕ್ರವಾರ ಕಲಬುರಗಿಯ ಭಾರತೀಯ ಜನ ಸಾಮ್ರಾಟ್ ಪಕ್ಷದ ಶಾಮರಾವ್ ಮೇದಾರ್ ನಾಮಪತ್ರ ಸಲ್ಲಿಸಿದ್ದಾರೆ.
ಕಲಬುರಗಿಯಲ್ಲಿ ಬೊಂಬು ಮಾರಾಟ ವ್ಯಾಪಾರಿಯಾಗಿರುವ ಶಾಮರಾಮ್ ಮೇದಾರ ಚುನಾವಣಾಧಿಕಾರಿ ಚಂದ್ರಶೇಖರ ನಾಯಕಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರದ ಜತೆಗೆ ಸಲ್ಲಿಸಿದ ಆಸ್ತಿ ವಿವರದಲ್ಲಿ ದ್ವಿಚಕ್ರ ವಾಹನ ಸೇರಿದಂತೆ ಒಟ್ಟು 1.62 ಲಕ್ಷ ರೂ. ಚರಾಸ್ತಿಯನ್ನು ತೋರಿಸಿದ್ದು, ಸ್ಥಿರಾಸ್ತಿ ಹೊಂದಿಲ್ಲ.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಸೂಚಕರಾದ ಲಕ್ಷ್ಮಣ, ಹನುಮೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net