‘ಸುಭಿಕ್ಷಾ’ ದಂತ ಆರೋಗ್ಯ ಮಾರ್ಗದರ್ಶಿ ಬಿಡುಗಡೆ

mng-30dec-chuntaru book
Published on


ಮಂಗಳೂರು : ದಂತವೈದ್ಯ, ಲೇಖಕ ಡಾ.ಮುರಲೀ ಮೋಹನ ಚೂಂತಾರು ಅವರ 16ನೇ ಕೃತಿ ‘ಸುಭಿಕ್ಷಾ’ ದಂತ ಆರೋಗ್ಯ ಮಾರ್ಗದರ್ಶಿಯನ್ನು ಕರ್ಣಾಟಕ ಬ್ಯಾಂಕಿನ ನಿವೃತ್ತ ಎಂಡಿ ಹಾಗೂ ಸಿಇಒ ಎಂ.ಎಸ್. ಮಹಾಬಲೇಶ್ವರ ಅವರು ನಗರದ ಪ್ರೆಸ್‌ಕ್ಲಬ್‌ನಲ್ಲಿ ಬಿಡುಗಡೆಗೊಳಿಸಿದರು.
ಸಮಾಜಮುಖಿ ಚಿಂತನೆಯ ಡಾ.ಮರಲೀ ಮೋಹನ ಚೂಂತಾರು ಅವರು ಆರೋಗ್ಯಕ್ಕೆ ಸಂಬಂಧಿಸಿದ ಸರಣಿ ಕೃತಿಗಳನ್ನು ರಚಿಸಿದ್ದು ಎಲ್ಲ ವರ್ಗದ ಜನತೆಗೆ ಉಪಯಕ್ತವಾಗಿದೆ. ದಂತ ಸಂರಕ್ಷಣೆ ಬಗ್ಗೆ ಪೋಷಕರು ಹಾಗೂ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಅವಶ್ಯ. ಈ ನಿಟ್ಟಿನಲ್ಲಿ ‘ಸುಭಿಕ್ಷಾ ’ ಕೃತಿ ದಂತ ಆರೋಗ್ಯದ ಅತ್ಯಪೂರ್ವ ಮಾಹಿತಿ ಹೊಂದಿದ್ದು ಸರಳವಾದ ಭಾಷೆಯಲ್ಲಿ ಓದುಗರಿಗೆ ಲಭ್ಯವಾಗಿದೆ ಎಂದರು.
ಪ್ರೊ.ಎ.ವಿ.ನಾವಡ ಕೃತಿ ಪರಿಚಯಿಸಿದರು. ಹಿರಿಯ ದಂತ ವೈದ್ಯ ಡಾ.ಗಣಪತಿ ಭಟ್ ಕುಳಮರ್ವ ಶುಭ ಹಾರೈಸಿದರು. ಡಾ. ಗೌರವ್ ಕುಳಮರ್ವ ಮುಖ್ಯ ಅತಿಥಿಯಾಗಿದ್ದರು. ಕಸಾಪ ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಡಾ.ಮಂಜುನಾಥ ರೇವಣ್‌ಕರ್ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಡಾ.ಮುರಲೀ ಮೋಹನ ಚೂಂತಾರು ಸ್ವಾಗತಿಸಿ, ಕಸಾಪ ದ.ಕ.ಜಿಲ್ಲಾ ಘಟಕದ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net