

ಮಂಡ್ಯ: ನಗರದ ಕರ್ನಾಟಕ ಸಂಘದಲ್ಲಿ ಜು.20ರಂದು ಬೆಳಗ್ಗೆ 10ಗಂಟೆಗೆ ಸುಭಾಷ್ ಪಾಳೇಕರ್ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಕೃಷಿಕರಿಗೆ ಹ್ಯೂಮಸ್ ಅರಿವು, ತೆಂಗಿನ ಸಸಿ ವಿತರಣಾ ಸಮಾರಂಭ ಆಯೋಜಿಸಲಾಗಿದೆ ಎಂದು ಸುಭಾಷ್ ಪಾಳೇಕರ್ ಕೃಷಿಕ ಕೆ.ಜಿ.ಅನಂತ್‌ರಾವ್ ಕೆರಗೋಡು ಹೇಳಿದರು.
ಪದ್ಮಶ್ರೀ ಡಾ.ಸುಭಾಷ್ ಪಾಳೇಕರ್ ಅವರ 75ನೇ ಜನ್ಮದಿನದ ಅಂಗವಾಗಿ ನಿರ್ಮಲ ಭೂಮಾತಾ ಸುಭಾಷ್ ಪಾಳೇಕರ್ ಕೃಷಿ ಆಂದೋಲನ ಜಿಲ್ಲಾ ಶಾಖೆಯಿಂದ ಹಮ್ಮಿಕೊಂಡಿರುವ ಸಮಾರಂಭವನ್ನು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಉದ್ಘಾಟಿಸಲಿದ್ದಾರೆ. ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸಲಿದ್ದಾರೆಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಪಂ ಮಾಜಿ ಸದಸ್ಯ ಎನ್.ಶಿವಣ್ಣ, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಜಿಲ್ಲಾ ಕೆಡಿಪಿ ಸದಸ್ಯ ಸಿ.ಎಂ.ದ್ಯಾವಪ್ಪ, ಮಳವಳ್ಳಿ ಸಂಪೂರ್ಣ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಎಂ.ಎನ್.ಮಹೇಶ್‌ಕುಮಾರ್ ಭಾಗವಹಿಸಲಿದ್ದು, ಮದ್ದೂರು ತಾಲೂಕು ಅಂಬರಹಳ್ಳಿಯ ಸುಭಾಷ್ ಪಾಳೇಕರ್ ಕೃಷಿಕ ರಾಮಣ್ಣ ಅವರನ್ನು ಸನ್ಮಾನಿಸಲಾಗುವುದು ಎಂದು ವಿವರಿಸಿದರು.
ಸುಭಾಷ್ ಪಾಳೇಕರ್ ಕೃಷಿಕರಾದ ಸೋಮಶೇಖರ್ ಹನಿಯಂಬಾಡಿ, ಮಂಜು ಹೆಬ್ಬಾಕವಾಡಿ, ವೆಂಕಟೇಶ್ ಎಂ.ಟಿ.ಮಲ್ಲಿಗೆರೆ, ಸ್ವಾಮಿ ಅಂಕನಹಳ್ಳಿ, ಹರೀಶ್‌ಗೌಡ ನಾಗಮಂಗಲ, ದಯಾನಂದ ಯಡಗನಹಳ್ಳಿ ಇದ್ದರು.