ಉಸ್ತುವಾರಿ ಸಮಿತಿಗೆ ಸುಭಾಷ ನಾಯ್ಕ ಆಯ್ಕೆ

SIRSI
Published on

ಶಿರಸಿ: ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ಪ್ರತಿಬಂದ) (ತಿದ್ದುಪಡಿ) ನಿಯಮಗಳು  ದೌರ್ಜನ್ಯ ನಿಯಂತ್ರಣ ಕಾಯ್ದೆ 2016ರ ನಿಯಮ 17ರಡಿ ಉತ್ತರ ಕನ್ನಡ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಗೆ ಮರಾಠಿಕೊಪ್ಪದ ಸುಭಾಷ ನಾಯ್ಕ ಆಯ್ಕೆಯಾಗಿದ್ದಾರೆ.

ಸರ್ಕಾರೇತರ ಸಂಸ್ಥೆಗಳ ವರ್ಗದಡಿ ಮೂವರು ಸದಸ್ಯರಲ್ಲಿ ಶಿರಸಿಯ ಭಗತ್ ಸಿಂಗ್ ಬ್ರಿಗೇಡ್ ಅಧ್ಯಕ್ಷರೂ ಆಗಿರುವ ಸುಭಾಷ ನಾಯ್ಕ್ ಓರ್ವ ಸದಸ್ಯರಾಗಿ ಆಯ್ಕೆಯಾಗಿದ್ದು ಈ ಕುರಿತು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಸುಭಾಷ ನಾಯ್ಕ್ ಅವರು ಒಂದು ದಶಕದಿಂದ ವೃತ್ತಿಪರ ಸಾಮಾಜಿಕ ಕಾರ್ಯ, ಸಮುದಾಯ ಅಭಿವೃದ್ಧಿ ಹಾಗೂ ಸರ್ಕಾರೇತರ ಸಂಸ್ಥೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಶಿರಸಿಯಲ್ಲಿ ಪ್ರತಿ ವರ್ಷ ರಾಜ್ಯಮಟ್ಟದ ಮ್ಯಾರಥಾನ್ ನೇತೃತ್ವದಲ್ಲಿ ನಡೆಯುವುದು ಉಲ್ಲೇಖನೀಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net